ಪಶ್ಚಿಮ ಬಂಗಾಳದ ಹಸನ್ ಶೇಖ್ ಎಂಬ ಯುವಕನೊಬ್ಬ ತನ್ನದೇ ಆದ ಎಲೆಕ್ಟ್ರಿಕ್ ಸೈಕಲ್ ತಯಾರಿಸಿದ್ದಾನೆ. ಮುರ್ಷಿದಾಬಾದ್‌ನ ಸಾಗರದಿಗಿ ತಾಲೂಕಿನ ಗೋಪಾಲಪುರ ಈತನ ಊರು. ಐಟಿಐ ವಿದ್ಯಾರ್ಥಿಯಾಗಿರುವ ಈತ ಯಾರ ಸಹಾಯವೂ ಇಲ್ಲದೇ ಈ ಯುವಕ ವಿದ್ಯುತ್ ಚಾಲಿತ ಸೈಕಲ್ ತಯಾರಿಸಿದ್ದಾನೆ. ಈ ಸೈಕಲ್ ನಿರ್ಮಾಣಕ್ಕೆ 18 ಸಾವಿರ ಖರ್ಚಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 80 ಕಿಮೀ ಚಲಿಸಬಹುದಾಗಿದೆ.
ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಗಳು ಹಾಗೂ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಹಸನ್ ಬ್ಯಾಟರಿ ಚಾಲಿತ ಬೈಸಿಕಲ್ ಅನ್ನು ತಯಾರಿಸಿದ್ದಾರೆ. ಪೆಟ್ರೋಲ್-ಡೀಸೆಲ್ ಇಂಧನದಿಂದ ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ. ಅದಕ್ಕಾಗಿಯೇ ಸರ್ಕಾರ ಪೆಟ್ರೋಲ್-ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ಬೈಕ್, ಸೈಕಲ್ ಬಳಕೆಗೆ ಉತ್ತೇಜನ ನೀಡುತ್ತಿದೆ. ಹಾಗಾಗಿ ಸ್ವಂತ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಅಭಿವೃದ್ಧಿಪಡಿಸಿದೆ ಎನ್ನುತ್ತಾರೆ ಹಸನ್.
ತಮ್ಮ ಭಾಗದ ಯುವಕ ಎಲೆಕ್ಟ್ರಿಕ್ ಸೈಕಲ್ ಕಂಡುಹಿಡಿರುವುದಕ್ಕೆ ಹಸನ್ ಶೇಖ್ ನಮ್ಮ ತಾಲೂಕಿನ ಹೆಮ್ಮೆ ಎಂದು ಸಾಗರದಿಗಿ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಆತನ ಆಲೋಚನಾ ಕ್ರಮವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಎಲ್ಲರೂ ಹಸನ್ರಂತೆ ಪರಿಸರದ ಬಗ್ಗೆ ಚಿಂತನೆ ನಡೆಸಿದರೆ ಮಾಲಿನ್ಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ. ಭವಿಷ್ಯದಲ್ಲಿ ಬ್ಯಾಟರಿ ಚಾಲಿತ ವಾಹನಗಳು ಮಾತ್ರ ರಸ್ತೆಗಳಲ್ಲಿ ಸಂಚರಿಸಲಿದ್ದು, ವಿದ್ಯುತ್ ಚಾಲಿತ ವಾಹನಗಳನ್ನೂ ಖರೀದಿಸುವುದಾಗಿ ಸ್ಥಳೀಯರು ಹೇಳಿದ್ದಾರೆ.