Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಅಂತಾರೆ. ಆದರೆ ಮದುವೆಗಾಗಿ ಹೇಳಿದ ಸುಳ್ಳೇ ಜೀವನಕ್ಕೆ ಮುಳುವಾಗುವ ಸಾಧ್ಯತೆ ಇರುತ್ತೆ ಅನ್ನೋದನ್ನು ಯಾರೂ ಯೋಚನೆ ಮಾಡೋಕೆ ಹೋಗಲ್ಲ. ಸುಳ್ಳು ಹೇಳೋದು ಮುಖ್ಯವಲ್ಲ. ಆದರೆ ಯಾವ ತರ ಸುಳ್ಳು ಹೇಳುತ್ತೇವೆ? ಅದು ಇನ್ನೊಬ್ಬರ ಮನಸ್ಸು ಅಥವಾ ವ್ಯಕ್ತಿಗೆ ಕಿರಿಕಿರಿ ಉಂಟು ಮಾಡುತ್ತೆಯೋ ಅನ್ನೋದನ್ನೂ ನಾವು ಯೋಚನೆ ಮಾಡಬೇಕಾಗುತ್ತದೆ. ಇಲ್ಲೊಂದು ಕಡೆ ಮದುವೆಗಾಗಿ ಹೇಳಿದ ಸುಳ್ಳು ಆ ವರನಿಗೆ ಮುಳುವಾಗಿರುವ ಘಟನೆ ನಡೆದಿದೆ.

  • Local18
  • |
  •   | Kanpur Dehat, India
First published:

  • 18

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ಹೌದು.. ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆಸಿದ್ದು, ವರ ಸುಳ್ಳು ಹೇಳಿದ ಅನ್ನೋ ಕಾರಣಕ್ಕೆ ಬೇಸರಗೊಂಡು ನವವಧುವೊಬ್ಬಳು ವರನ ಮನೆಗೆ ಹೋಗುತ್ತಿದ್ದಾಗ ಅರ್ಧ ದಾರಿಯಲ್ಲೇ ಇಳಿದು ತವರಿಗೆ ವಾಪಸ್ ಆದ ಘಟನೆ ನಡೆದಿದೆ.

    MORE
    GALLERIES

  • 28

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ತನ್ನ ಮದುವೆಯ ಬಗ್ಗೆ ಸುಂದರ ಕನಸು ಕಂಡಿದ್ದ ಯುವತಿಯೊಬ್ಬಳು ಮನೆಯವರ ಒಪ್ಪಿಗೆಯಂತೆ ಯುವಕನನ್ನು ಮದುವೆಯಾಗಿದ್ದಳು. ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    MORE
    GALLERIES

  • 38

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ರಾಜಸ್ಥಾನದ ಬಿಕನೇರ್‌ ನಿವಾಸಿ ರವಿ ಎಂಬ ಯುವಕನಿಗೆ ವಾರಾಣಸಿಯ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಇಬ್ಬರಿಗೆ ವಾರಾಣಸಿಯಲ್ಲಿ ಮದುವೆ ಕೂಡ ಆಗಿದೆ. ರವಿ ಮದುವೆಯಾಗುವ ಮುನ್ನ ನಾನು ಪ್ರಯಾಗ್‌ರಾಜ್‌ ನಿವಾಸಿ ಎಂದು ಹೇಳಿದ್ದ. ಆದರೆ, ಆತ ರಾಜಸ್ಥಾನದ ನಿವಾಸಿ ಎಂದು ಮದುವೆಯಾದ ಬಳಿಕ ವಧುವಿಗೆ ಗೊತ್ತಾಗಿದೆ.

    MORE
    GALLERIES

  • 48

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ತನ್ನನ್ನು ಮದುವೆಯಾದ ವರ ರಾಜಸ್ಥಾನದ ನಿವಾಸಿ ಎಂದು ತಿಳಿದ ವಧು ‘ಅಷ್ಟು ದೂರ ನಾನು ಹೋಗಲಾರೆ’ ಎಂದು ಪತಿಯನ್ನು ಅರ್ಧ ದಾರಿಯಲ್ಲಿಯೇ ಬಿಟ್ಟು ತವರು ಮನೆಗೆ ಬಂದಿದ್ದಾಳೆ.

    MORE
    GALLERIES

  • 58

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ಮದುವೆಯ ಬಳಿಕ ರವಿ ತನ್ನ ಪತ್ನಿಯನ್ನು ರಾಜಸ್ಥಾನದ ಬಿಕನೇರ್‌ ಕಡೆ ಕರೆದುಕೊಂಡು ಹೊರಟಿದ್ದ. ಬಸ್‌ನಲ್ಲಿ 7 ಗಂಟೆ ಪ್ರಯಾಣಿಸಿದರೂ ಪತಿಯ ಪ್ರಯಾಗ್‌ರಾಜ್‌ ಮನೆ ತಲುಪದಿರುವಾಗ ಪತ್ನಿಗೆ ಸಂಶಯ ಶುರುವಾಗಿದೆ. ಆಗ ಆಕೆಗೆ ತನ್ನ ಪತಿ ಸುಳ್ಳು ಹೇಳಿರುವುದು ಗೊತ್ತಾಗಿದೆ.

    MORE
    GALLERIES

  • 68

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ಆಗ ಕಾನ್ಪುರ ಹೆದ್ದಾರಿಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ನವ ವಧು 7 ಗಂಟೆ ಪ್ರಯಾಣದ ಬಳಿಕವೂ ನನ್ನ ಅತ್ತೆ-ಮಾವಂದಿರ ಮನೆಗೆ ತಲುಪಲಾಗುತ್ತಿಲ್ಲ ಎಂದು ಅಳಲು ಶುರು ಮಾಡಿದ್ದಾಳೆ. ಪತಿ ವಾಪಸ್ ಮನೆಗೆ ಕಳಿಸಲು ಒಪ್ಪದಿದ್ದಾಗ ಆಕೆ ವಾರಾಣಸಿ ಹಾಗೂ ಕಾನ್ಪುರ ಹೆದ್ದಾರಿಯಲ್ಲಿ ಪೊಲೀಸ್‌ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ನನ್ನನ್ನು ವಾಪಸ್‌ ನನ್ನ ತವರು ಮನೆಗೆ ಕಳುಹಿಸಿ ಎಂದು ಮನವಿ ಮಾಡಿದ್ದಾಳೆ.

    MORE
    GALLERIES

  • 78

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ಇತ್ತ, ರವಿ ವಧುವಿನ ಕುಟುಂಬಸ್ಥರಿಗೆ ಎಲ್ಲವೂ ತಿಳಿದಿತ್ತು ಎಂದು ಪೊಲೀಸರ ಬಳಿ ಹೇಳಿದ್ದಾನೆ. ಆದರೆ, ಪೊಲೀಸರು ವಧುವಿನ ತಾಯಿ ಬಳಿ ಕೇಳಿದ್ರೆ, ನಮಗೆ ಈ ಬಗ್ಗೆ ಯಾವುದೇ ಮಾಹಿತಿಯಿದ್ದಿಲ್ಲ. ವರ ಸುಳ್ಳು ಹೇಳಿದ್ದಾನೆ. ನಮ್ಮ ಮಗಳನ್ನು ವಾಪಸ್ ನಮ್ಮ ಮನೆಗೆ ಕಳುಹಿಸಿಕೊಡಿ ಎಂದು ತಾಯಿ ಮನವಿ ಮಾಡಿದ್ದಾರೆ.

    MORE
    GALLERIES

  • 88

    Viral News: ಸುಳ್ಳು ಹೇಳಿದ ವರನನ್ನು ಅರ್ಧದಾರಿಯಲ್ಲೇ ಬಿಟ್ಟು ತವರಿಗೆ ಮರಳಿದ ನವ ವಧು!

    ಅತ್ತ ವಧುವನ್ನು ಪೊಲೀಸರು ವಾರಾಣಸಿಗೆ ಕಳುಹಿಸಿಕೊಡುತ್ತಿದ್ದಂತೆ ಇತ್ತ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವರ ತನ್ನ ಹೆಂಡತಿಯಿಲ್ಲದೇ ಏಕಾಂಗಿಯಾಗಿ ರಾಜಸ್ಥಾನದ ತನ್ನ ಹುಟ್ಟೂರಿಗೆ ಮರಳಿದ್ದಾನೆ.

    MORE
    GALLERIES