Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಆಗಾಗ ದೌರ್ಜನ್ಯಗಳು ನಡೆಯುತ್ತಿರುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ಇಂತಹದೇ ಆಘಾತಕಾರಿ ಘಟನೆ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ನಡೆದಿದೆ.

First published:

 • 18

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ಹಿಂದೂ ವೈದ್ಯರೊಬ್ಬರನ್ನು ಅವರ ಕಾರು ಚಾಲಕನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭಯಾನಕ ಘಟನೆ ಪಾಕಿಸ್ತಾನದ ಹೈದರಾಬಾದ್‌ನಲ್ಲಿ ನಡೆದಿದೆ.

  MORE
  GALLERIES

 • 28

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ಹೈದರಬಾದ್‌ ಭಾಗದಲ್ಲಿ ಇರುವ ಹಿಂದೂ ಸಮುದಾಯದ ಜನರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗಲೇ ಖ್ಯಾತ ಹಿಂದೂ ವೈದ್ಯನ ಹತ್ಯೆಯಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.

  MORE
  GALLERIES

 • 38

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ಮಾರ್ಚ್‌ ಏಳರಂದು ವೈದ್ಯರ ಕಾರು ಚಾಲಕ ಈ ದುಷ್ಕೃತ್ಯ ಎಸಗಿದ್ದು, ಹತ್ಯೆಗೀಡಾದ ವೈದ್ಯರನ್ನು ಡಾ. ಧರಮ್ ದೇವ್ ರಾಥಿ ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಮಟ್ಟದಲ್ಲಿ ವೈದ್ಯ ವೃತ್ತಿಯಲ್ಲಿ ಖ್ಯಾತಿ ಗಳಿಸಿದ್ದರು.

  MORE
  GALLERIES

 • 48

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ವೈದ್ಯರನ್ನು ಕೊಲೆಗೈದ ಕಾರು ಚಾಲಕ ಆರೋಪಿ ಹನೀಫ್ ಲೆಘರಿ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ದಿನವೇ ಆರೋಪಿಯ ಖೈರ್‌ಪುರದ ನಿವಾಸದಲ್ಲಿ ಬಂಧನ ಮಾಡಿದ್ದಾರೆ.

  MORE
  GALLERIES

 • 58

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ಆರೋಪಿಯು ಚಾಕುವಿನಿಂದ ವೈದ್ಯರ ಕತ್ತು ಸೀಳಿ ಕೊಲೆ ಮಾಡಿದ್ದು, ಈ ಘಟನೆಯ ವಿರುದ್ಧ ಪಾಕಿಸ್ತಾನದ ಹಿಂದೂ ಸಮುದಾಯದ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಹಲವೆಡೆ ಪ್ರತಿಭಟನೆಯನ್ನೂ ಮಾಡಿದ್ದಾರೆ.

  MORE
  GALLERIES

 • 68

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ಮೂಲಗಳ ಪ್ರಕಾರ ಆರೋಪಿ ಹನೀಫ್ ಲೆಘರಿ ವೈದ್ಯ ಡಾ. ಧರಮ್ ದೇವ್ ರಾಥಿ ಅವರ ಕಾರು ಚಾಲಕನಾಗಿದ್ದ. ರಸ್ತೆಯಲ್ಲಿ ಬರೋ ವೇಳೆ ಇಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ ಎನ್ನಲಾಗಿದೆ.

  MORE
  GALLERIES

 • 78

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ವೈದ್ಯರು ಮನೆ ತಲುಪಿದ ಮೇಲೂ ಇಬ್ಬರ ನಡುವೆ ಸಿಟ್ಟು ಕಡಿಮೆ ಆಗಿರಲಿಲ್ಲ, ವೈದ್ಯನ ಮನೆ ಬಳಿ ಬರುವ ತನಕ ಸುಮ್ಮನಿದ್ದ ಕಾರು ಚಾಲಕ ಬಳಿಕ ಅವರ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

  MORE
  GALLERIES

 • 88

  Crime News: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಕೊಲೆ; ಕಾರ್ ಚಾಲಕನಿಂದಲೇ ಕೃತ್ಯ!

  ಕೊಲೆಯಾದ ವೈದ್ಯರು ಹೈದರಾಬಾದ್ ಪ್ರದೇಶದಲ್ಲಿ ಪ್ರಸಿದ್ಧ ಚರ್ಮ ರೋಗ ವೈದ್ಯರಾಗಿದ್ದರು, ಕರ್ತವ್ಯ ನಿಷ್ಠೆಯಿಂದ, ಸ್ಥಳೀಯ ಜನರ ಮೆಚ್ಚುಗೆಗೂ ಪಾತ್ರರಾಗಿದ್ದರು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

  MORE
  GALLERIES