Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

ಗೋರಖ್‌ಪುರ: ಭೀಕರ ಅಗ್ನಿದುರಂತದಲ್ಲಿ 30 ವರ್ಷದ ವಿಶೇಷ ಚೇತನ ಮಹಿಳೆ ಮತ್ತು ಆಕೆಯ ನಾಲ್ವರು ಮಕ್ಕಳು ದಾರುಣ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

First published:

  • 17

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಉತ್ತರ ಪ್ರದೇಶದ ಕುಶಿ ನಗರ ಜಿಲ್ಲೆಯಲ್ಲಿ ನಿನ್ನೆ ಮಧ್ಯಾಹ್ನ ಈ ದುರಂತ ನಡೆದಿದ್ದು, ಕುಟುಂಬದ ಇಬ್ಬರು ಸದಸ್ಯರು ಸೇರಿದಂತೆ ಇನ್ನೂ ಮೂವರಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಪೊಲೀಸರು ತಿಳಿಸಿದ್ದಾರೆ. (ಎಲ್ಲವೂ ಸಾಂದರ್ಭಿಕ ಚಿತ್ರಗಳು)

    MORE
    GALLERIES

  • 27

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಮೃತರನ್ನು ಫಾತಿಮಾ ಮತ್ತು ಅವರ ನಾಲ್ಕು ಮಕ್ಕಳಾದ ರೋಖಿ (6), ಅಮೀನಾ (4), ಆಯೇಷಾ (2), ಮತ್ತು ಎರಡು ತಿಂಗಳ ಖದೀಜಾ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಮಲಗಿದ್ದಾಗ ಬೆಂಕಿ ಕಾಣಿಸಿಕೊಂಡು ದುರ್ಘಟನೆ ನಡೆದಿದೆ.

    MORE
    GALLERIES

  • 37

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಬೆಂಕಿ ಕಾಣಿಸಿಕೊಂಡ ತಕ್ಷಣ ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಕೋಣೆಯ ಪ್ರವೇಶದ್ವಾರದಲ್ಲೇ ಬೆಂಕಿಯ ಕೆನ್ನಾಲಿಗೆ ದೊಡ್ಡ ಮಟ್ಟದಲ್ಲಿ ಆವರಿಸಿದ್ದರಿಂದ ಹೊರಗೆ ಬರಲಾಗದೆ ಕೋಣೆಯಲ್ಲೇ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 47

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಮಹಿಳೆಯ ಮಾವ ಶಫೀಕ್ (70) ಮತ್ತು ಅತ್ತೆ ಮೋತಿರಾಣಿ (67) ಕೂಡ ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಆದರೆ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೂ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 57

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಇನ್ನು ಈ ಘಟನೆಯಲ್ಲಿ ಅವರ ನೆರೆಹೊರೆಯವರಲ್ಲಿ ಒಬ್ಬರು ಗಾಯಗೊಂಡಿದ್ದು, ಮೂವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರಿಗೆ ಜಿಲ್ಲಾಡಳಿತ ಎಲ್ಲ ರೀತಿಯ ನೆರವು ನೀಡುತ್ತಿದೆ.

    MORE
    GALLERIES

  • 67

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ತಲಾ ₹ 4 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    MORE
    GALLERIES

  • 77

    Fire Crash: ಭೀಕರ ಅಗ್ನಿ ದುರಂತದಲ್ಲಿ ವಿಶೇಷ ಚೇತನ ಮಹಿಳೆ, ನಾಲ್ಕು ಮಕ್ಕಳು ದಾರುಣ ಸಾವು!

    ಬೆಂಕಿ ಅವಘಡ ಕಾಣಿಸಿಕೊಳ್ಳಲು ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಶುರು ಮಾಡಿದ್ದಾರೆ.

    MORE
    GALLERIES