ಪೆರುವಿನ 26 ವರ್ಷದ ಜೂಲಿಯೊ ಸೀಸರ್ ಬರ್ಮೆಜೊ ಬಂಧಿತ ವ್ಯಕ್ತಿಯಾಗಿದ್ದು ಈ ಮಮ್ಮಿಗೆ ಆತ ಜುವಾನಿಟಾ ಎಂದು ಹೆಸರಿಟ್ಟಿದ್ದಲ್ಲದೇ ಅದನ್ನು ತನ್ನ ‘ಆಧ್ಯಾತ್ಮಿಕ ಗೆಳತಿ’ ಎಂದು ಕರೆದಿದ್ದಾನೆ. ಅಲ್ಲದೇ, ‘ಜುವಾನಿಟಾ ನನ್ನ ಜೊತೆ ನನ್ನ ಮನೆಯಲ್ಲೇ ಇರುತ್ತಾಳೆ. ನಾನು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಆಕೆ ನನ್ನ ಜೊತೆಯೇ ಮಲಗುತ್ತಾಳೆ’ ಎಂದು ಜೂಲಿಯೊ ಸೀಸರ್ ಬರ್ಮೆಜೊ ತನಿಖೆ ವೇಳೆ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.