ಶುಕ್ರವಾರ ಸಂಜೆ 7.30ಕ್ಕೆ ಹಾಸ್ಟೆಲ್‌ನ ಊಟದ ನಂತರ ಗೆಳತಿಯರು ಊಟದ ನಂತರ ಗ್ರೂಪ್ ಸ್ಟಡಿಗಾಗಿ ಕಾಮನ್ ರೂಂಗೆ ಹೋಗಲು ಆಕೆಯನ್ನೂ ಕರೆಯುತ್ತಾರೆ. ಆಗ ದಿವ್ಯಾ ‘ನನಗೆ ಹುಷಾರಿಲ್ಲ. ನೀವು ಹೋಗಿ. ನಾನು ರೂಂನಲ್ಲೇ ಓದಿಕೊಳ್ಳುತ್ತೇನೆ’ ಎಂದು ಹೇಳಿದ್ದಳು. ಹಾಗಾಗಿ ಆಕೆಯನ್ನು ಒಬ್ಬಳನ್ನೇ ಬಿಟ್ಟು ಗ್ರೂಪ್ ಸ್ಟಡಿಗೆ ಹೋದ ಗೆಳತಿಯರು ವಾಪಸ್ ಬಂದಾಗ ದಿವ್ಯಾ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಭಾವುಕ ಪತ್ರ ಬರೆದಿದ್ದು, ಆ ಪತ್ರದಲ್ಲಿ ಅಪ್ಪನ ಬಗ್ಗೆ ಬೇಸರ ಮತ್ತು ಸಿಟ್ಟನ್ನು ವ್ಯಕ್ತಪಡಿಸಿದ್ದಾಳೆ. ‘ಅಪ್ಪಾ.. ನನ್ನ ಸಾವಿಗೆ ಒಂದೇ ಒಂದು ಕಾರಣ, ಅದು ನೀನೇ. ನಾನು ನಿನ್ನನ್ನು ತುಂಬಾ ದ್ವೇಷಿಸುತ್ತೇನೆ, ಏಕೆಂದರೆ ನೀನು ನನ್ನನ್ನು ನಿಮ್ಮ ಮಗಳೆಂದು ಪರಿಗಣಿಸಲಿಲ್ಲ. ನಿನಗೆ ಆರ್ಡರ್ ಮಾಡೋದು ಮತ್ತು ಕೋಪಿಸಿಕೊಳ್ಳೋದು ಮಾತ್ರ ಗೊತ್ತು’ ಎಂದು ತನ್ನ ನೋವನ್ನು ಬರೆದುಕೊಂಡಿದ್ದಾಳೆ.
ತನ್ನ ಡೆತ್ ನೋಟ್‌ನಲ್ಲಿ ಅಗಲಿರುವ ತಾಯಿಯನ್ನೂ ನೆನಪಿಸಿ ಭಾವುಕಳಾಗಿರುವ ವಿದ್ಯಾರ್ಥಿನಿ, ‘ಅಮ್ಮ ನನ್ನನ್ನು ಕ್ಷಮಿಸಿ ಬಿಡು. ನೀನು ಯಾವಗಲೂ ನನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೆಯಲ್ವಾ? ಇನ್ಮುಂದೆ ನಾನೇ ನಿನ್ನ ಜೊತೆಗೆ ಇರುತ್ತೇನೆ. ನಾನು ಇಷ್ಟು ಆಕ್ರೋಶಗೊಳ್ಳಲು ಸಾಧ್ಯವೇ ಇಲ್ಲ. ನನ್ನ ಆತ್ಮ ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ. ಪ್ರತೀ ಕಣ್ಣೀರಿಗೂ ಸೇಡು ತೀರಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾಳೆ.
ಬಾಲಕಿಯು ಕೆಲ ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡ ನಂತರ ಮಾನಸಿಕವಾಗಿ ನೊಂದಿದ್ದಳು. ತಾಯಿಯ ಅಗಲಿಕೆಯ ನಂತರ ಹೆತ್ತವರ ಪ್ರೀತಿ ಸಿಗದೆ ಪರಿತಪಿಸುತ್ತಿದ್ದಳು. ತಂದೆ ಮಾತ್ರ ಮಗಳನ್ನು ಕಟ್ಟುನಿಟ್ಟಾಗಿ ಎಷ್ಟೋ ಬೇಕೋ ಅಷ್ಟು ಖಡಕ್ ಆಗಿ ಮಾತಾಡಿ ಭಯದಿಂದ ಬೆಳೆಸಿದ್ದರು. ಮೇಲ್ನೋಟಕ್ಕೆ ಬಾಲಕಿಯು ಪೋಷಕರ ಪ್ರೀತಿ ಸಿಗದೆ ಇಂತಹ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾಳೆ ಎಂದು ಹೇಳಲಾಗ್ತಿದೆ.