ಡಿಸೋಜಾ ಕುಟುಂಬ ಭಾರತೀಯರ ರಕ್ಷಣಾ ಕಾಯಿದೆ ಅಡಿ ತಮ್ಮ ಮನೆ ಹಿಂತಿರುಗಿಸಬೇಕು ಎಂದು ಬ್ರಿಟಿಷ್ ಸರ್ಕಾರವನ್ನು ಮನವಿ ಮಾಡಿದ್ದರು. ಇದರ ಪ್ರಕಾರ ಬ್ರಿಟಿಷ್ ಸರ್ಕಾರ 1946ರಲ್ಲಿ ಡಿಸೋಜಾ ಕುಟುಂಬಕ್ಕೆ ಮನೆ ಹಿಂತಿರುಗಿಸಲು ಆದೇಶ ನೀಡಿತ್ತು. ಆದರೂ ಡಿಸೋಜ ಕುಟುಂಬಕ್ಕೆ ಮನೆ ಸಿಕ್ಕಿರಲಿಲ್ಲ. ಹಲವು ಬಾರಿ ಮನವಿ ಮಾಡಿದರೂ ಮನೆ ಸಿಕ್ಕಿರಲಿಲ್ಲ. ಡಿಸೋಜಾ ಕುಟುಂಬ ಬೇರೆಡೆಗೆ ಸ್ಥಳಾಂತರಗೊಂಡಿದ್ದರೂ, ಅವರ ಕಾನೂನಿನಾತ್ಮಕ ಹೋರಾಟ ಮಾತ್ರ ನಿಲ್ಲಿಸಲಿಲ್ಲ.
ಕಟ್ಟಡದಲ್ಲಿನ ಇತರ ಫ್ಲಾಟ್‌ಗಳ ಸ್ವಾಧೀನವನ್ನು ಅದರ ನಿಜವಾದ ಮಾಲೀಕರಿಗೆ ಹಿಂತಿರುಗಿಸಲಾಗಿದೆ, ನಮಗೆ ಮಾತ್ರ ನೀಡಿಲ್ಲ. ಈ ಬಗ್ಗೆ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಮನೆ ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದರು. ಸರ್ಕಾರಕ್ಕೂ ಹಲವು ಅರ್ಜಿಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತ ಸರ್ಕಾರ ಈ ಪ್ಲಾಟ್ಗಳನ್ನು ನಿವೃತ್ತ ಸರ್ಕಾರಿ ನೌಕರರಿಗೆ ನೀಡಿತ್ತು.