Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

ಕೋಲ್ಕತ್ತಾ: ಅಕ್ರಮವಾಗಿ ನಿರ್ಮಾಣ ಮಾಡಿದ್ದ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿ ಒಂಭತ್ತು ಮಂದಿ ಸಾವನ್ನಪ್ಪಿ ಆರು ಮಂದಿ ಗಂಭೀರ ಗಾಯಗೊಂಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

First published:

  • 17

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದ ಎಗ್ರಾದಲ್ಲಿರುವ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡಿರುವ ಆರು ಮಂದಿಯ ಪೈಕಿ ಇಬ್ಬರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಕೋಲ್ಕತ್ತಾದಿಂದ ಸುಮಾರು 170 ಕಿಮೀ ದೂರದಲ್ಲಿರುವ ಬಂಗಾಳ-ಒಡಿಶಾ ಗಡಿಯ ಸಮೀಪವಿರುವ ಖಾಡಿಕುಲ್ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದ್ದು, 1 ಕಿಲೋ ಮೀಟರ್‌ವರೆಗೂ ಪಟಾಕಿ ಸ್ಫೋಟದ ಸದ್ದು ಭಯಾನಕವಾಗಿ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    MORE
    GALLERIES

  • 37

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಸ್ಫೋಟದ ತೀವ್ರತೆಗೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಹಾರಿಹೋಗಿದ್ದು, ಮೃತಪಟ್ಟವರ ದೇಹಗಳು ಸುಟ್ಟು ಛಿದ್ರಗೊಂಡು ಮರಗಳು ಮತ್ತು ಅಲ್ಲೇ ಇದ್ದ ಕೆರೆಯ ಮೇಲೆಲ್ಲ ಹಾರಿ ಬಿದ್ದಿತ್ತು ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 47

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಅಕ್ರಮ ಪಟಾಕಿ ಕಾರ್ಖಾನೆ ನಡೆಸುತ್ತಿದ್ದ ಮಾಲೀಕ 2022ರ ಅಕ್ಟೋಬರ್‌ನಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಜೈಲಿಂದ ಹೊರಬಂದ ಮೇಲೆ ಪುನಃ ಅಕ್ರಮವಾಗಿ ಕಾರ್ಖಾನೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

    MORE
    GALLERIES

  • 57

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಕಾರ್ಖಾನೆ ಮಾಲೀಕನನ್ನು ಭಾನು ಬಾಗ್ ಎಂದು ಗುರುತಿಸಲಾಗಿದ್ದು, ಈತ ನಿನ್ನೆ ನಡೆದ ಭೀಕರ ಸ್ಫೋಟ ಸಂಭವಿಸಿದ ನಂತರ ತನ್ನ ಕುಟುಂಬದೊಂದಿಗೆ ಒಡಿಶಾಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 67

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಆರೋಪಿ ಪರಾರಿಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳ ಡಿಜಿಪಿ ಮನೋಜ್ ಮಾಳವೀಯ ಅವರು ಒಡಿಶಾ ಡಿಜಿಪಿ ಸುನೀಲ್ ಕುಮಾರ್ ಬನ್ಸಾಲ್ ಅವರ ಜೊತೆ ಮಾತನಾಡಿದ್ದು, ಆರೋಪಿಯ ಬಂಧನಕ್ಕೆ ತಂಡವನ್ನು ರಚಿಸಿ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

    MORE
    GALLERIES

  • 77

    Firecracker Factory: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 9 ಸಾವು, ದೇಹಗಳು ಛಿದ್ರ ಛಿದ್ರ!

    ಇನ್ನು ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಅಕ್ರಮ ಕಾರ್ಖಾನೆಗೆ ಅನುಮತಿ ನೀಡಿದ ಸ್ಥಳೀಯ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದಾರೆ. ಎಗ್ರಾ ಇನ್ಸ್‌ಪೆಕ್ಟರ್ ಇನ್ ಚಾರ್ಜ್ ಮೌಸಮ್ ಚಕ್ರವರ್ತಿ ಅವರಿಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದೆ.

    MORE
    GALLERIES