ಉತ್ತರ ರೈಲ್ವೆಯ ನಿವೃತ್ತ ಲೋಕೋ ಡ್ರೈವರ್ ರಾಮ್ ಕುಮಾರ್ ತಿವಾರಿ ಅವರು 1991 ರಲ್ಲಿ ಸಿಬಿಐನಲ್ಲಿ ಎಫ್‌ಐಆರ್ ದಾಖಲಿಸಿದ್ದರು. ತಿವಾರಿ ತಮ್ಮ ಎಫ್‌ಐಆರ್‌ನಲ್ಲಿ ತಮ್ಮ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ವೈದ್ಯಕೀಯ ಪರೀಕ್ಷೆಯ ಅಗತ್ಯವಿತ್ತು, ಇದಕ್ಕಾಗಿ ತೆರೆಳಿದ್ದಾಗ, ವರ್ಮಾ 150 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಒಪ್ಪದಿದ್ದಕ್ಕೆ 100 ರೂ.ಗೆ ಬೇಡಿಕೆಯಿಟ್ಟಿದ್ದರು. ಕೊನೆಗೆ ಲಂಚವನ್ನು ಪಡೆಯುವಾಗ ದುಡ್ಡಿನೊಂದಿಗೆ ವರ್ಮಾ ಅವರನ್ನು ಸಿಬಿಐ ರೆಡ್ ಹ್ಯಾಂಡ್ ಆಗಿ ಬಂಧಿಸಿತ್ತು.