Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಪಟಾಕಿ ಕಂಪನಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದಾಗಿ ಪಟಾಕಿ ತಯಾರಿಕಾ ಕಟ್ಟಡ ಕುಸಿದಿದೆ. ಘಟನೆಯಲ್ಲಿ 8 ಮಂದಿ ಕಾರ್ಮಿಕರು ಪ್ರಾಣಕಳೆದುಕೊಂಡಿದ್ದಾರೆ.

First published:

 • 17

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

  ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ ಸಂಭವಿಸಿದೆ.   30ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೋದಾಮಿನಲ್ಲಿದ್ದ ಪಟಾಕಿಗಳು ಭಾರೀ ಸದ್ದಿನಿಂದ ಸಿಡಿದಿವೆ. ಈ ಸ್ಫೋಟದಿಂದಾಗಿ ಪಟಾಕಿ ತಯಾರಿಕಾ ಕಟ್ಟಡ ಕುಸಿದಿದೆ.  

  MORE
  GALLERIES

 • 27

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

  ಅಪಘಾತದಿಂದಾಗಿ  ದೊಡ್ಡ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಿಕೊಂಡಿದೆ.. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.  ಸ್ಫೋಟದ ಕಾರಣವನ್ನು  ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  (pc: Twitter/ANI)

  MORE
  GALLERIES

 • 37

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

  ಈ  ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದು, 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. (pc: Twitter/ANI)

  MORE
  GALLERIES

 • 47

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

   ಈ  ಪಟಾಕಿ ಘಟಕವು ಕಾಂಚೀಪುರಂನಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದೆ. ಘಟಕವು ಅರ್ಹ ಪರವಾನಗಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ವೇಳೆ ಕಾರ್ಖಾನೆಯಲ್ಲಿ 35 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. (Pc: Twitter/ Srikkanth)

  MORE
  GALLERIES

 • 57

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

  ಅಪಘಾತದ ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಒಂದು ಗಂಟೆಯ ಪರಿಶ್ರಮದ  ನಂತರ ಸಂಪೂರ್ಣ ಬೆಂಕಿಯನ್ನು ಹಾರಿಸಿದ್ದಾರೆ. (Pc: Twitter/ Srikkanth)

  MORE
  GALLERIES

 • 67

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

  ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್, "ಸ್ಫೋಟದಿಂದಾಗಿ ಕಟ್ಟಡ ಕುಸಿದಿದೆ. ಅವಶೇಷಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲಾಗಿದೆ  " ಎಂದು ಹೇಳಿದ್ದಾರೆ. (Pc: Twitter/ Srikkanth)

  MORE
  GALLERIES

 • 77

  Firecracker: ಪಟಾಕಿ ಗೋದಾಮಿನಲ್ಲಿ ಭಾರಿ ಸ್ಫೋಟ! 8 ಮಂದಿ ಸಾವು, 15 ಮಂದಿಗೆ ಗಂಭೀರ ಗಾಯ

  ಇಡೀ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 20 ಮಂದಿ ನೌಕರರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು.  ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ 1 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  MORE
  GALLERIES