ಚಿನ್ನಾಭರಣ ಸೇರಿದಂತೆ ತನ್ನ ಇಡೀ ಆಸ್ತಿಯನ್ನೇ Rahul Gandhi ಹೆಸರಿಗೆ ವರ್ಗಾಯಿಸಿದ ವೃದ್ಧೆ
ಉತ್ತರಾಖಂಡದ ಡೆಹ್ರಾಡೂನ್ನ 78 ವರ್ಷದ ವೃದ್ಧೆಯೊಬ್ಬರು ತಮ್ಮ ಇಡೀ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಬಳಿ ಇದ್ದ 10 ತೊಲ ಚಿನ್ನಾಭರಣವನ್ನು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ವೃದ್ದೆ ರಾಹುಲ್ ಗಾಂಧಿ ಮತ್ತು ಅವರ ವಿಚಾರಗಳು ದೇಶಕ್ಕೆ ಅಗತ್ಯವಾಗಿದೆ. ರಾಹುಲ್ ಗಾಂಧಿ ಅವರು ಆಲೋಚನೆಗಳಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ಅದಕ್ಕಾಗಿಯೇ ತನ್ನ ಆಸ್ತಿಯನ್ನು ಅವರಿಗೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.
2/ 7
ಪುಷ್ಪಾ ಮುಂಜಿಯಲ್ ಅವರು ರಾಹುಲ್ ಗಾಂಧಿಗೆ ತಮ್ಮ ಆಸ್ತಿಯನ್ನು ವಿಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮಹಾನಗರ ಅಧ್ಯಕ್ಷ ಲಾಲಚಂದ್ ಶರ್ಮಾ ಹೇಳಿದ್ದಾರೆ.
3/ 7
ಪುಷ್ಪಾ ಈ ಹಿಂದೆ ಮಹಿಳೆ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಆಗಿ ಕಾರ್ಯ ನಿರ್ವಹಿಸಿದ್ದರು. ರಾಹುಲ್ ಗಾಂಧಿಯವರ ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗಿ ಆಕೆಯ ಹೆಸರಿಗೆ ಆಸ್ತಿಯನ್ನು ನೀಡಿದ್ದಾರೆ ಎಂದು ಮುಂಜಿಯಲ್ ಹೇಳುತ್ತಾರೆ.
4/ 7
ಈ ಕುರಿತು ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇವತ್ತಿನವರೆಗೆ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗವನ್ನು ಮಾಡಿದೆ ಎಂದು ಮುಂಜಿಯಲ್ ತಿಳಿಸಿದ್ದಾರೆ
5/ 7
ಇಂದಿರಾಗಾಂಧಿಯಾಗಲಿ, ರಾಜೀವ್ ಗಾಂಧಿಯಾಗಲಿ ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ದೇಶ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
6/ 7
ತನ್ನ ತಂದೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಕೂಡ ಅವರು ತಿಳಿಸಿದ್ದಾರೆ.
7/ 7
ಅವಿವಾಹಿತರಾಗಿದ್ದ ಮುಂಜಿಯಲ್ ಸದ್ಯ ಡೆಹ್ರಾಡೂನ್ನ ಪ್ರೇಮಧಾಮ್ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದಾರೆ.