ಬಾಲಕಿಯನ್ನು ಖರೀದಿಸಿದ್ದ ಆರೋಪಿ ಕುಟುಂಬದವರು ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷ ಅನುಭವಿಸಿ, ಬಿಡುಗಡೆಯಾದ ನಂತರ ಊರ ಹೊರಗಿನ ನಿರ್ಜನ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ನಾವು ದಾಳಿ ಮಾಡಿದಾಗ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು. ಕೈಗಳಿಗೆ ಮೆಹೆಂದಿ ಹಚ್ಚಲಾಗಿತ್ತು. ಅವಳು ಫೋನ್‌ನಲ್ಲಿ ಕಾರ್ಟೂನ್ ನೋಡುತ್ತಿದ್ದಳು. ನಾವು ಬಾಲಕಿಯನ್ನು ವಿಚಾರಿಸಲು ಪ್ರಯತ್ನಿಸಿದರೂ ಆಕೆ ಏನೂ ಮಾಹಿತಿ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. (ಸಾಂಕೇತಿಕ ಚಿತ್ರ)