ಮಧ್ಯಪ್ರದೇಶ ಪೊಲೀಸ್ ವಸತಿ ನಿಗಮದಲ್ಲಿ ಗುತ್ತಿಗೆ ಆಧಾರದಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಹೇಮಾ ಮೀನಾ ಎಂಬುವವರ ಮನೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗುವಷ್ಟು ಆಸ್ತಿ ಪತ್ತೆಯಾಗಿದೆ. ದಾಳಿಯಲ್ಲಿ 7ರಿಂದ 8 ಕಾರುಗಳು, 30 ಹಸುಗಳು, 65 ನಾಯಿಗಳು, 30 ಲಕ್ಷ ಮೌಲ್ಯದ ಟಿವಿ ಸೇರಿ ಒಟ್ಟು 7 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. (ಸಾಂದರ್ಭಿಕ ಚಿತ್ರ)
ಭೋಪಾಲ್‌ನ ಬಿಲ್ಖಿರಿಯಾ ಪ್ರದೇಶದಲ್ಲಿನ ಅವರ ಫಾರ್ಮ್‌ಹೌಸ್ ಮತ್ತು ಇತರ ಎರಡು ಜಾಗದಲ್ಲಿ ಇರುವ ಆಸ್ತಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ ನಂತರ ಎಂಪಿ ಪೊಲೀಸ್ ವಸತಿ ನಿಗಮದ ಸಹಾಯಕ ಎಂಜಿನಿಯರ್ ಹುದ್ದೆಯಿಂದ ಹೇಮಾ ಮೀನಾ ಅವರನ್ನು ವಜಾಗೊಳಿಸಲಾಗಿದೆ. ಮೀನಾ 20,000 ಚದರ ಅಡಿ ಕೃಷಿ ಭೂಮಿಯನ್ನು ತನ್ನ ತಂದೆಯ ಹೆಸರಿನಲ್ಲಿ ಖರೀದಿಸಿ ನಂತರ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಮನೆಯನ್ನೂ ನಿರ್ಮಿಸಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ)
ಗುತ್ತಿಗೆ ಇಂಜಿನಿಯರ್ ಆಗಿದ್ದ ಹೇಮಾ ತಿಂಗಳಿಗೆ 30,000 ರೂಪಾಯಿ ಸಂಬಳ ಪಡೆಯುತ್ತಿದ್ದರು ಅಕ್ರಮ ಮಾರ್ಗದಲ್ಲಿ ಹಣವನ್ನು ಗಳಿಸಿದ್ದಾರೆ ಎಂದು ಆರೋಪ ಹಲವು ದಿನಗಳಿಂದ ಕೇಳಿಬಂದಿತ್ತು. 2020ರಲ್ಲಿ ಇಂಜಿನಿಯರ್ ಹೇಮಾ ಮೀನಾ ವಿರುದ್ಧ ಅಕ್ರಮ ಆಸ್ತಿಗಳ ಬಗ್ಗೆ ಲೋಕಾಯುಕ್ತ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಇದೀಗ ದಿಢೀರ್ ದಾಳಿಯಿಂದ ಅಕ್ರಮ ಬೆಳಕಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)