ವಿಶೇಷವೆಂದಸರೆ ಈ 55 ವರ್ಷದ ವ್ಯಕ್ತಿ 25 ವರ್ಷದ ಯುವತಿಯ ಜೊತೆ ವಿವಾಹವಾಗಿದ್ದಾನೆ. ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ಫೋಟೋಗೆ ಕೆಲವರು ಆಕ್ಷೇಪ ವ್ಯಕ್ತವಾಗಿದ್ದರೆ, ಇನ್ನು ಕೆಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮದುವೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ. ಬಲ್ಲೂರಾಮ್ ಎಂಬಾತ ಅಂಗವಿಕಲೆ ವಿನೀತಾ ಎಂಬ 25 ವರ್ಷದ ಯುವತಿಯೊಂದಿಗೆ ವಿವಾಹವಾಗಿದ್ದಾರೆ.
ವಿನೀತಾ ಸದ್ಯ ಗಾಲಿಕುರ್ಚಿಗೆ ಸೀಮಿತವಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಮರದಿಂದ ಬಿದ್ದು ವಿನೀತಾ ಅವರ ಬೆನ್ನುಮೂಳೆಗೆ ಹಾನಿಯಾಗಿದ್ದು, ಕಾಲುಗಳು ಸ್ವಾದೀನ ಕಳೆದುಕೊಂಡಿವೆ. ಇದರಿಂದ ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬರುತ್ತಿರಲಿಲ್ಲ. ಇದನ್ನು ತಿಳಿದ ಬಲ್ಲುರಾಮ್ ನೇರವಾಗಿ ಅವಳ ಬಳಿಗೆ ಹೋಗಿ " ನನಗೆ ನೀನು ಇಷ್ಟ. ನಿನಗೆ ಇಷ್ಟವಾದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ, ಇಷ್ಟು ವರ್ಷ ಶಿವನ ಸೇವೆ ಮಾಡಿದಂತೆಯೇ ಅಂಗವಿಕಲ ಪತ್ನಿಯ ಸೇವೆ ಮಾಡುತ್ತೇನೆ ಎಂದು ಹೇಳಿದ್ದಾನೆ.
ಈ ವಿಷಯ ಹುಡುಗಿಯವರ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ, ಆಕೆಯ ತಂದೆ-ತಾಯಿಎಗ ಮೊದಲು ಏನು ಮಾಡಬೇಕೆಂದು ತಿಳಿಯದೇ ಸುಮ್ಮನಾಗಿದ್ದರು. ಕೊನೆಗೆ ಒಮ್ಮತ ನಿರ್ಧಾರ ತೆಗೆದುಕೊಂಡ ಮೇಲೆ ವಿನೀತಾ ಹಾಗೂ ಬಲ್ಲೂರಾಮ್ ಮದುವೆ ನಿಶ್ಚಯ ಮಾಡಿ, ವಿಧಿ-ವಿಧಾನಗಳೊಂದಿಗೆ ಸಂಪ್ರದಾಯಬದ್ಧವಾಗಿ ಈ ಮದುವೆಯನ್ನು ಮಾಡಿದ್ದಾರೆ. ಬಲ್ಲೂರಾಮ್ ನಿರ್ಧಾರಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.