ಒಂದು ವರ್ಷದ ಪ್ರಾಯದ ದುರ್ಗೇಶ್ ಮನೆಯ ಸುತ್ತಲೂ ಎಲ್ಲೂ ಕಾಣಲಿಲ್ಲ. ನಂತರ ನಾಗಲಕ್ಷಿ ನಿನ್ನ ಮಗು ರಾತ್ರಿ 7: 30 ರ ಸುಮಾರಿಗೆ ತೊಟ್ಟಿಲಿನಲ್ಲಿ ಮಲಗಿದ್ದಾನೆ ಎಂದು ಹೇಳಿದಳು. ತಕ್ಷಣವೇ ತೊಟ್ಟಿಲ ಬಳಿ ಹೋದ ನಂದಿನಿಗೆ ಮಗು ಉಸಿರಾಡುತ್ತಿರುವುದು ಕಾಣಲಿಲ್ಲ. ಕೂಡಲೇ ಅಲ್ಲಿದ್ದ ಸಾಯಿಬಾಬಾ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಮಗುವಿನ ಸ್ಥಿತಿ ಕಂಡು ಪರೀಕ್ಷೆ ಒಳಪಡಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದರು.