ಮೃತ ಯೋಧರನ್ನು ಸಾಗರ್ ಬನ್ನೆ (25), ಕಮಲೇಶ್ ಆರ್ (24), ಯೋಗೇಶ್‌ಕುಮಾರ್ ಜೆ (24) ಮತ್ತು ಸಂತೋಷ್ ಎಂ ನಾಗರಾಳ್ (25) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮೃತ ಯೋಧರ ಕುಟುಂಬಗಳಿಗೆ ತಿಳಿಸಲಾಗಿದೆ ಎಂದು ಸೇನೆ ತಿಳಿಸಿದೆ.
2/ 8
ಇನ್ನು ದುಃಖದ ಸಂಗತಿಯೆಂದರೆ ಮೃತ ಯೋಧರ ಪೈಕಿ ಸಂತೋಷ್ ಎಂ ನಾಗರಾಳ್ (25) ಅವರು ಕರ್ನಾಟಕದ ಬಾಗಲಕೋಟೆ ಮೂಲದವರು ಆಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವರು ನಾಲ್ಕು ವರ್ಷಗಳ ಹಿಂದಷ್ಟೇ ಸೇನೆಗೆ ಸೇರಿದ್ದರು ಎಂದು ತಿಳಿದು ಬಂದಿದೆ.
3/ 8
ಬತಿಂಡಾ ಮಿಲಿಟರಿ ಸ್ಟೇಷನ್ ಒಳಗೆ ಬುಧವಾರ ಬೆಳಗಿನ ಜಾವ 4.35ರ ಸುಮಾರಿಗೆ ಈ ಗುಂಡಿನ ದಾಳಿ ಘಟನೆ ನಡೆದಿದ್ದು, ಈ ವೇಳೆ ಸೇನಾ ಘಟಕದ ಬ್ಯಾರಕ್‌ನಲ್ಲಿ ಯೋಧರು ನಿದ್ರಿಸುತ್ತಿದ್ದರು ಎಂದು ತಿಳಿದು ಬಂದಿದೆ.
4/ 8
ಘಟನೆ ನಡೆದ ಪ್ರದೇಶದಲ್ಲಿ ಜನರ ಓಡಾಡವನ್ನು ನಿರ್ಬಂಧಿಸಲಾಗಿದ್ದು, ತ್ವರಿತ ಪ್ರತಿಕ್ರಿಯಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಸೇನೆಯ ನೈಋತ್ಯ ಕಮಾಂಡ್ ಹೇಳಿಕೆ ನೀಡಿದೆ.
5/ 8
ಇನ್ನು ಇದು ಉಗ್ರರ ದಾಳಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈವರೆಗೂ ಸೇನಾ ಘಟಕದ ಒಳಗೆ ಪ್ರವೇಶಿಸಲು ಸೇನೆಯು ಪೊಲೀಸರಿಗೆ ಅವಕಾಶ ನೀಡಿಲ್ಲ. ಮೃತರಾದ ಎಲ್ಲ ನಾಲ್ಕೂ ಮಂದಿ 80 ಮೀಡಿಯಂ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದಾಳಿಕೋರ ಸಾಮಾನ್ಯ ವಸ್ತ್ರದಲ್ಲಿದ್ದ ಎಂದು ಹೇಳಲಾಗಿದೆ.
6/ 8
ಮಿಲಿಟರಿ ಸ್ಟೇಷನ್‌ನಲ್ಲಿನ ಅಧಿಕಾರಿಗಳ ಮೆಸ್‌ನ ಒಳಭಾಗದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ. ಕಂಟೋನ್ಮೆಂಟ್‌ನ ಎಲ್ಲ ನಾಲ್ಕು ದ್ವಾರಗಳನ್ನು ಮುಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
7/ 8
ಘಟಕದ ಗಾರ್ಡ್ ರೂಂನಿಂದ 28 ಕಾರ್ಟ್ರಿಡ್ಜ್‌ಗಳಿದ್ದ ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಕೆಲವು ಸೇನಾ ಸಿಬ್ಬಂದಿ ಈ ದಾಳಿ ಹಿಂದೆ ಇರಬಹುದು ಎಂದು ಪೊಲೀಸರು ಊಹಿಸಿದ್ದಾರೆ.
8/ 8
ಕುರ್ತಾ ಪೈಜಾಮ ಧರಿಸಿದ್ದ ಇಬ್ಬರು ಐಎನ್‌ಎಸ್‌ಎಎಸ್ ರೈಫಲ್ ಮತ್ತು ಕೊಡಲಿ ಹಿಡಿದುಕೊಂಡು ಬಟಿಂಡಾ ಮಿಲಿಟರಿ ಠಾಣೆಯಲ್ಲಿ ನಾಲ್ವರು ಯೋಧರನ್ನು ಕೊಂದಿದ್ದಾರೆ ಎಂದು ಪಂಜಾಬ್ ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ.
First published:
18
Army Base Firing: ಪಂಜಾಬ್‌ನ ಸೇನಾ ಘಟಕದಲ್ಲಿ ಗುಂಡಿನ ದಾಳಿ; ಕರ್ನಾಟಕದ ಯೋಧ ಸೇರಿ ನಾಲ್ವರು ಸೈನಿಕರ ಸಾವು!