PHOTOS: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಹುತಾತ್ಮರಾದ ಯೋಧರ ಸಂಖ್ಯೆ 40ಕ್ಕೆ ಏರಿಕೆ

ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದಲ್ಲಿ ಉಗ್ರರು ನಡೆಸಿದ ಭೀಕರ ಬಾಂಬ್​ ದಾಳಿಯಲ್ಲಿ 30 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಕಳೆದ 20 ವರ್ಷಗಳಲ್ಲಿ ನಡೆದ ದಾಳಿಗಳಲ್ಲಿ ಅತೀ ದೊಡ್ಡ ದಾಳಿ ಇದಾಗಿದ್ದು, ಈ ಘಟನೆಯಲ್ಲಿ ನಲ್ವತ್ತಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಸ್ಕ್ರಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರರು ಸುಮಾರು 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಸಿಆರ್​ಪಿಎಫ್​ ಯೋಧರು ಇದ್ದ ಸ್ಥಳದಲ್ಲಿ ಸ್ಫೋಟಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಜೈಶ್​ ಎ ಮೊಹಮ್ಮದ್​ ಎಂಬ ಭಯೋತ್ಪಾನಾ ಸಂಘಟನೆ ಹೊತ್ತುಕೊಂಡಿದೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನಡೆದ ಕಾರ್​ ಬಾಂಬ್​ ಸ್ಫೋಟದ ನಂತರ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

  • News18
  • |
First published: