ಅಮೆರಿಕದಲ್ಲಿ ಕೇರಳ ನರ್ಸ್ ಬರ್ಬರ ಹತ್ಯೆ; ಹೆಂಡತಿಗೆ ಚಾಕುವಿನಿಂದ ಇರಿದು ಕೊಂದ ಗಂಡ
ಕೊಲೆಯಾದ ಮೆರಿನ್ ಬ್ರಾವರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್ಸ್ ಹಾಸ್ಪಿಟಲ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೋವಿಡ್ ವಾರ್ಡ್ನಲ್ಲಿ ತಮ್ಮ ರಾತ್ರಿ ಪಾಳಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದಾಗ ಆಕೆಯ ಗಂಡ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾನೆ.
ಅಮೆರಿಕದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲಕ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಷ್ಟಕ್ಕೂ ಈ ಕೊಲೆ ಮಾಡಿರುವುದು ಆಕೆಯ ಗಂಡನೇ ಎನ್ನಲಾಗಿದ್ದು, ಚಾಕುವಿನಿಂದ ಚುಚ್ಚಿ-ಚುಚ್ಚಿ ಸಾಯಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2/ 8
ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಸಮೀಪವಿರುವ ದಕ್ಷಿಣ ಫ್ಲೋರಿಡಾದ ಕೋರಲ್ ಸ್ಪ್ರಿಂಗ್ಸ್ ನಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಮೆರಿನ್ ಜಾಯ್(26) ಎಂದು ಗುರುತಿಸಲಾಗಿದ್ದು, ಕೇರಳದ ಕೊಟ್ಟಾಯಂನ ಮೊನಿಪ್ಪಲ್ಲಿಯ ನಿವಾಸಿ ಎಂದು ತಿಳಿದು ಬಂದಿದೆ.
3/ 8
ಮೃತ ಮಹಿಳೆ ಮೆರಿನ್ ಗಂಡ ಫಿಲಿಪ್ ಮಾತ್ವೇ ಅಲಿಯಾಸ್ ನೆವಿನ್(34) ಆಗಿದ್ದಾನೆ. ಪ್ರಾಥಮಿಕ ತನಿಖೆಯ ಪ್ರಕಾರ, ಗಂಡ ನೆವಿನ್ ತನ್ನ ಹೆಂಡತಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
4/ 8
ಈತ ಮೂಲತಃ ಕೊಟ್ಟಾಯಂನ ವೆಲಿಯನಾಡ್ ಸಮೀಪದ ಮನ್ನೂತರದ ನಿವಾಸಿಯಾಗಿದ್ದು, ಅಮೆರಿಕದಲ್ಲಿ ದಂಪತಿಗಳು ವಾಸವಿದ್ದರು ಎನ್ನಲಾಗಿದೆ. ಸದ್ಯ ಆರೋಪಿಯನ್ನು ಅಮೆರಿಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
5/ 8
ಕೊಲೆಯಾದ ಮೆರಿನ್ ಬ್ರಾವರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್ಸ್ ಹಾಸ್ಪಿಟಲ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೋವಿಡ್ ವಾರ್ಡ್ನಲ್ಲಿ ತಮ್ಮ ರಾತ್ರಿ ಪಾಳಿ ಮುಗಿಸಿ ಆಸ್ಪತ್ರೆಯಿಂದ ಹೊರ ಬಂದಾಗ ಆಕೆಯ ಗಂಡ ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾನೆ.
6/ 8
ಅಷ್ಟೇ ಅಲ್ಲದೇ ನೆವಿನ್ ಆಸ್ಪತ್ರೆಯ ಪಾರ್ಕಿಂಗ್ ತಾಣದಲ್ಲಿ ಮೆರಿನ್ ಮೇಲೆ ಕಾರು ಹರಿಸಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟೊತ್ತಿಗಾಗಲೇ ಮೆರಿನ್ ಸಾವನ್ನಪ್ಪಿದ್ದರು.
7/ 8
ಕೋರಲ್ ಸ್ಪ್ರಿಂಗ್ಸ್ ಪೊಲೀಸರ ಪ್ರಕಾರ, ದಂಪತಿಗಳ ನಡುವಿನ ಕೌಟುಂಬಿಕ ಕಲಹದಿಂದಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಘಟನೆಯ ಬಳಿಕ ನೆವಿನ್ ಕೂಡ ಚಾಕುವಿನಿಂದ ಇರಿದುಕೊಂಡಿದ್ದು, ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
8/ 8
ಮೆರಿನ್ ನೆವಿನ್ನಿಂದ ದೂರ ಇರಲು ಬಯಸುತ್ತಿದ್ದಳು. ಈ ಜಂಜಾಟಗಳಿಂದಾಗಿ ಆಕೆ ತನ್ನ ಕೆಲಸವನ್ನು ಬಿಡಲು ಯೋಚಿಸಿದ್ದಳು ಎಂದು ಮೆರಿನ್ ಕುಟುಂಬಸ್ಥರು ಹೇಳಿದ್ದಾರೆ. ನೆವಿನ್ ಈಗ ಅಮೆರಿಕ ಪೊಲೀಸರ ವಶದಲ್ಲಿದ್ದು, ಆತನ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ. ದಂಪತಿಗೆ ಮುದ್ದಾದ ಹೆಣ್ಣು ಮಗುವಿದೆ.