21 ವರಗಳು ಮತ್ತು 21 ವಧುಗಳು ಒಂದೇ ಸಮಾರಂಭದಲ್ಲಿ ಒಟ್ಟಿಗೆ ವಿವಾಹವಾದರು. ಈ ವಿಶೇಷ ವಿವಾಹಕ್ಕೆ ಆಗಮಿಸಿದ್ದ ಎಲ್ಲರೂ ಅವರನ್ನು ಹೃದಯದಿಂದ ಅಭಿನಂದಿಸಿದರು. ಹಾಜಿ ಇದ್ರೀಶ್ ಅವರು ತಮ್ಮ ಇಡೀ ಕುಟುಂಬ ಸದಸ್ಯರನ್ನು ನಾವು ಅನಗತ್ಯ ಖರ್ಚುಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ಎಲ್ಲರನ್ನೂ ಒಪ್ಪಿಸಿ ಈ ಸಾಮೂಹಿಕ ಮಾಡಿಸಿದ್ದಾರೆ. ಇದರಿಂದ ಉಳಿತಾಯವಾಗುವ ಹಣವನ್ನು ಸಮಾಜದ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಬಹುದು. ಅಲ್ಲದೆ ಇದರಿಂದ ಸಮಾಜ ಉನ್ನತಿ ಹೊಂದಲು ಸಾಧ್ಯ ಎಂದು ತಿಳಿಸಿದ್ದಾರೆ.