ಕಳೆದ ಮೂರು ದಿನಗಳಲ್ಲಿ ಭಾರತದಲ್ಲಿ (ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ) ಮೃತಪಟ್ಟ ಚೀತಾ ಮರಿಗಳ ಸಂಖ್ಯೆ ಮೂರಕ್ಕೆ ಏರಿದ್ದು, ಆ ಮೂಲಕ 2 ತಿಂಗಳಲ್ಲಿ ಒಟ್ಟು 6 ಚೀತಾಗಳು ಸಾವನ್ನಪ್ಪಿದಂತಾಗಿದೆ.
2/ 8
ಭಾರತಕ್ಕೆ ಕರೆತಂದ ಬಳಿಕ 'ಜ್ವಾಲಾ' ಹೆಸರಿನ ಹೆಣ್ಣು ಚೀತಾ ಮಾರ್ಚ್ ತಿಂಗಳಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಈ ಮಧ್ಯೆ ಅತೀವ ನಿಶ್ಶಕ್ತಿಯಿಂದ ಬಳಲುತ್ತಿದ್ದ ಎರಡು ತಿಂಗಳ ಒಂದು ಮರಿ ಮಾರ್ಚ್ 23ರಂದು ಮೃತಪಟ್ಟಿತ್ತು.
3/ 8
ಕುನೋದಲ್ಲಿ ವಿಪರೀತ ಬಿಸಿಲು ಮತ್ತು ನಿರ್ಜಲೀಕರಣದಿಂದ ಆ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ 2 ಚಿರತೆ ಮರಿಗಳು ಮೃತಪಟ್ಟಿತ್ತು. ಇದೀಗ ಮತ್ತೊಂದು ಮರಿ ಸಾವನ್ನಪ್ಪಿದ್ದು, 4 ಮರಿಗಳ ಪೈಕಿ ಉಳಿದುಕೊಂಡಿರುವ ಕೊನೆಯ ಚೀತಾ ಮರಿಯ ಆರೋಗ್ಯ ಕೂಡ ಗಂಭೀರ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
4/ 8
ಸದ್ಯ ಉಳಿದುಕೊಂಡಿರುವ ಕೊನೆಯ ಮರಿಯನ್ನು ಪಾಲ್ಪುರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ತಜ್ಞರ ಜೊತೆ ಅಧಿಕಾರಿಗಳು ಸಂಪರ್ಕದಲ್ಲಿದ್ದು ಸಂವಹನ ನಡೆಸುತ್ತಿದ್ದಾರೆ.
5/ 8
ಒಂದೇ ದಿನ ಎರಡು ಮರಿಗಳು ಸೇರಿದಂತೆ ಒಟ್ಟು ಮೂರು ಚೀತಾ ಮರಿಗಳು ಸಾವನ್ನಪ್ಪಲು ಕಾರಣ ಏನು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಇನ್ನೂ ಬಾಯ್ಬಿಟ್ಟಿಲ್ಲ.
6/ 8
ಭಾರತದಲ್ಲಿ ಚೀತಾಗಳ ಸಂಖ್ಯೆ ಪುನರುಜ್ಜೀವನಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಕುನೋ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ನರೇಂದ್ರ ಮೋದಿ ಅವರ ಜನ್ಮದಿನದಂದು ಭಾರತಕ್ಕೆ ಕರೆತರಲಾಗಿತ್ತು. ಮೋದಿ ಅವರು ಅವುಗಳನ್ನು ಕುನೋ ಉದ್ಯಾನವನಕ್ಕೆ ಬಿಟ್ಟಿದ್ದರು.
7/ 8
ಚೀತಾಗಳ ಸಾವಿನ ಕುರಿತು ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಮಧ್ಯಪ್ರದೇಶದಿಂದ ಬೇರೆಡೆಗೆ ಚೀತಾಗಳನ್ನು ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಕಳೆದ ವಾರ ಸೂಚಿಸಿತ್ತು.
8/ 8
ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ಕೂಡಲೇ ಚೀತಾಗಳನ್ನು ರಾಜಸ್ಥಾನ ಅಥವಾ ಬೇರೆಡೆಗೆ ಸ್ಥಳಾಂತರಿಸಿ. ಈ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿತ್ತು.
First published:
18
Cheetah Cubs Death: ಕುನೋದಲ್ಲಿ ಮುಂದುವರಿದ ಸಾವಿನ ಸರಣಿ! 2 ದಿನದಲ್ಲಿ 3 ಚೀತಾ ಮರಿಗಳ ಸಾವು!