Viral News: 57 ವರ್ಷದ ವ್ಯಕ್ತಿಯ ಅನ್ನನಾಳದಲ್ಲಿ ಸಿಕ್ತು ₹100ರ 2 ನೋಟು! ಹೊಟ್ಟೆಯೊಳಗೆ ಹೋಗಿದ್ದೇಗೆ ಗೊತ್ತಾ?
ಕೊಲ್ಕೊತ್ತಾ: ಏಕಾಏಕಿ ವ್ಯಕ್ತಿಯೊಬ್ಬನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಆತನನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದಾಗ ರೋಗಿಯ ಹೊಟ್ಟೆಯಲ್ಲಿ 100 ರೂಪಾಯಿಯ ಎರಡು ನೋಟುಗಳು ಪತ್ತೆಯಾಗಿರುವ ಅಚ್ಚರಿಯ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಕೊಲ್ಕೊತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ (RGKMCH) ವ್ಯಕ್ತಿಯೊಬ್ಬನನ್ನು ಅನಾರೋಗ್ಯದ ಹಿನ್ನೆಲೆ ದಾಖಲಿಸಲಾಗಿತ್ತು. ಈ ವೇಳೆ ಆತನನ್ನು ಚಿಕಿತ್ಸೆಗೆ ಒಳಪಡಿಸಿದಾಗ ಅನ್ನನಾಳದಲ್ಲಿ 100 ರೂಪಾಯಿಯ ಎರಡು ನೋಟುಗಳು ಇರೋದು ಪತ್ತೆಯಾಗಿದೆ.
2/ 7
57 ವರ್ಷದ ರೋಗಿಯು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವನಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಕಾರಣ ತಪಾಸಣೆ ನಡೆಸಿದಾಗ ನೋಟು ಪತ್ತೆಯಾಗಿದೆ.
3/ 7
ಕೂಡಲೇ ವೈದ್ಯರು ರೋಗಿಯನ್ನು RGKMCH ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದು, ಬಳಿಕ ಆತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿದ್ದ 100 ಎರಡು ನೋಟುಗಳನ್ನು ಹೊರ ತೆಗೆದಿದ್ದಾರೆ.
4/ 7
ಶಸ್ತ್ರಚಿಕಿತ್ಸೆ ಯಶಸ್ವಿಯಾದ ರೋಗಿ ಚೇತರಿಸಿಕೊಂಡಿದ್ದು, ಬಳಿಕ ವೈದ್ಯರು ಆತನನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೂ ಮೊದಲು ಆತನ ಮಾನಸಿಕ ಸಮಸ್ಯೆಯ ಕುರಿತು ತಪಾಸಣೆ ಮಾಡಿ ಆರೋಗ್ಯ ವೃದ್ಧಿಗೆ ಸಲಹೆ ಸೂಚನೆ ನೀಡಿದ್ದಾರೆ.
5/ 7
ರೋಗಿಯ ಕುಟುಂಬಸ್ಥರು ಹೇಳುವ ಪ್ರಕಾರ ಕಳೆದ ಒಂದೂವರೆ ತಿಂಗಳಿಂದ ಆತ ಆಹಾರ ನುಂಗಲು ಕಷ್ಟಪಡುತ್ತಿದ್ದ. ಸ್ಥಳೀಯ ಕ್ಲಿನಿಕ್‌ಗಳಲ್ಲಿ ತೋರಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಹೀಗಾಗಿ ಮಾರ್ಚ್ 1ರಂದು ಆರ್‌ಜಿಕೆಎಂಸಿಎಚ್ ಆಸ್ಪತ್ರೆಗೆ ಕರೆತಂದಾಗ ನಿಜ ವಿಷಯ ಗೊತ್ತಾಗಿದೆ.
6/ 7
ರೋಗಿಯ ಕುಟುಂಬದ ಯಾವುದೇ ಸದಸ್ಯರಿಗೆ ಆತ ಕರೆನ್ಸಿ ನೋಟುಗಳನ್ನು ಸೇವಿಸಿದ್ದಾನೆ ಎಂಬ ಕಲ್ಪನೆಯೇ ಇರಲಿಲ್ಲ ಎಂದು ಮನೆಯವರು ಹೇಳಿದ್ದು, ಸದ್ಯ ಆತ ಆಹಾರವನ್ನು ಸರಾಗವಾಗಿ ನುಂಗುತ್ತಿದ್ದಾನೆ ಎಂದು ತಿಳಿದು ಬಂದಿದೆ.
7/ 7
ವೈದ್ಯರು ಮಾಹಿತಿ ನೀಡಿದ ಪ್ರಕಾರ, ರಾಟ್ ಟೂತ್ ಫೋರ್ಸ್ಪ್ ಬಳಸಿ ಎಂಡೋಸ್ಕೋಪಿಕ್ ಮೂಲಕ ಎರಡೂ ಕರೆನ್ಸಿ ನೋಟುಗಳನ್ನು ಒಂದೊಂದಾಗಿ ಹೊಟ್ಟೆಯಿಂದ ತೆಗೆಯಲಾಗಿದೆ. ಎಂದು ಹೇಳಿದ್ದಾರೆ.
First published:
17