ನವೆಂಬರ್ 1 ಅಂದರೆ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ .ಈ ವಿಶೇಷ ದಿನದಿಂದ ಹಲವು ಕಂಪನಿಗಳು ಹೊಸ ನೀತಿ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಅದರಲ್ಲಿ ಮುಖ್ಯವಾಗಿ SBI ಬ್ಯಾಂಕ್ ಈ ಹಿಂದೆ ತಿಳಿಸಿದಂತೆ ನಗದು ವಿತ್ ಡ್ರಾ ಮಾಡುವುದರಲ್ಲಿ ಕಡಿತ ಮಾಡಲಿದೆ. ಅದೇ ರೀತಿ ಇನ್ನು ಮುಂದೆ ಮನೆಯಲ್ಲಿಯೇ ಕೂತು ರೈಲಿನ ಜನರಲ್ ಟಿಕೆಟ್ನ್ನು ಬುಕ್ ಮಾಡಿಕೊಳ್ಳಬಹುದು. ಇದಲ್ಲದೆ ಇನ್ನಿತರ ಬದಲಾವಣೆಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
UTS ಮೊಬೈಲ್ ಅಪ್ಲಿಕೇಶನ್ ಅಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಫೋನ್ ಸೇರಿದಂತೆ ಎಲ್ಲ ಸ್ಮಾರ್ಟ್ಫೋನ್ನಲ್ಲೂ ಬಳಸಿಕೊಳ್ಳಬಹುದಾಗಿದೆ. ಈ ಆ್ಯಪ್ನ್ನು ಡೌನ್ಲೋಡ್ ಮಾಡಿದ ಬಳಿಕ ಯೂಸರ್ ಐಡಿ ಮತ್ತು ಪಾಸ್ವರ್ಡ್ನ್ನು ರಚಿಸಿಕೊಳ್ಳಬೇಕು. ನಿಮ್ಮ ರೈಲ್ವೇ ನಿಲ್ದಾಣದಿಂದ 25 - 30 ಮೀಟರ್ ದೂರದಿಂದ ನೀವು ಇಲ್ಲಿ ಟಿಕೆಟ್ಗಳನ್ನು ಖರೀದಿಸಬಹುದು. ಆದರೆ ಈ ಆ್ಯಪ್ ಮೂಲಕ ಕೇವಲ 4 ಟಿಕೆಟ್ ಖರೀದಿಯ ಆಯ್ಕೆಯನ್ನು ಮಾತ್ರ ನೀಡಲಾಗಿದೆ.
5-ನವೆಂಬರ್ ಮೊದಲ ದಿನದಿಂದ ಚುನಾವಣಾ ಬಾಂಡ್ ಯೋಜನೆಯ ಬಾಂಡ್ಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಘೋಷಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲ ಶಾಖೆಗಳಲ್ಲಿ ನವೆಂಬರ್ 10ರವರೆಗೆ ಈ ಬಾಂಡ್ಗಳು ಮಾರಾಟಕ್ಕೆ ಲಭ್ಯವಿರಲಿದೆ. ಈ ಬಾಂಡ್ಗಳು 15ದಿನಗಳವರೆಗೆ ಮಾನ್ಯತೆ ಹೊಂದಿರಲಿದ್ದು, ಆನಂತರ ಯಾವುದೇ ರಾಜಕೀಯ ಪಕ್ಷಕ್ಕೆ ಠೇವಣಿ ಮಾಡಲು ಅವಕಾಶ ನೀಡಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.