ಒಬ್ಬ ಯುವಕ ಮತ್ತು ಆಕೆಯ ಸಹಚರ ಯುವತಿಯನ್ನು ಕಾರ್‌ನಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಈ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2/ 7
2020ರಲ್ಲಿ ಸಂತ್ರಸ್ತ ಯುವತಿಗೆ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ಅನುಭವ್ ಹೆಸರಿನ ಆರೋಪಿ ಮುಂದಿನ ದಿನಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿದ್ದ.
3/ 7
ಅದರಂತೆ ಕೆಲಸ ನೀಡುವುದಾಗಿ ನಂಬಿಸಿದ ಆರೋಪಿ ಇತ್ತೀಚೆಗೆ ಸಂತ್ರಸ್ತ ಯುವತಿಯನ್ನು ಮಾಳವೀಯ ನಗರ ಮೆಟ್ರೋ ನಿಲ್ದಾಣಕ್ಕೆ ಬರುವಂತೆ ಸೂಚಿಸಿದ್ದ.
4/ 7
ಆತನ ಮಾತನ್ನು ನಂಬಿದ ಯುವತಿ ಕೆಲಸದ ಆಸೆಯಿಂದ ಹೇಳಿದ ಸ್ಥಳಕ್ಕೆ ಬಂದಿದ್ದು, ಆಗ ಆತ ಕಾರ್‌ನಲ್ಲಿ ತನ್ನ ಸಹಚರನೊಂದಿಗೆ ಯುವತಿಗೆ ಕಾಯುತ್ತಿದ್ದ.
5/ 7
ಅಲ್ಲಿಂದ ಆಕೆಯನ್ನು ಕರೆದುಕೊಂಡು ಹೋದ ಆರೋಪಿಗಳು ಬೆಗಂಪುರ ಪ್ರದೇಶಕ್ಕೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
6/ 7
ಅಲ್ಲದೇ ಅತ್ಯಾಚಾರದ ವಿಡಿಯೋ ಮಾಡಿರುವ ಆರೋಪಿಗಳು ಪೊಲೀಸ್ ದೂರು ನೀಡಿದರೆ ಸೋಶೀಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡೋದಾಗಿ ಬೆದರಿಸಿ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.
7/ 7
ಬಳಿಕ ಅಲ್ಲಿಂದ ಸಾವರಿಸಿಕೊಂಡು ಬಂದ ಯುವತಿ ಕಾಮುಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಗ್ಯಾಂಗ್‌ರೇಪ್) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
First published:
17
Crime News: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ!