ರಾಷ್ಟ್ರ ರಾಜಧಾನಿ ನವದೆಹಲಿಯ ಬದರ್‌ಪುರ ಪ್ರದೇಶದ ಮೊರಾಲ್‌ಬಂದ್ ಎಂಬಲ್ಲಿ ಈ ಘಟನೆ ನಡೆದಿದ್ದು, ಕಳೆದ ಭಾನುವಾರ ಮಧ್ಯಾಹ್ನ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
2/ 7
ಬಾಲಕಿಯು ತನ್ನ ಗೆಳತಿಯ ಮನೆಯಲ್ಲಿ ಇದ್ದ ವೇಳೆ ಈ ಘಟನೆ ನಡೆದಿದ್ದು, ಸದ್ಯ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಆಕೆಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
3/ 7
ಚಾಕು ಇರಿತದಿಂದ 17 ವರ್ಷದ ಬಾಲಕಿಯ ಕತ್ತು, ತಲೆಗೆ ಗಾಯವಾಗಿದ್ದು, ಬಾಲಕಿ ಮದುವೆ ಆಗಲು ನಿರಾಕರಿಸಿದ್ದಕ್ಕೆ ಆರೋಪಿಯು ಆಕೆಯ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
4/ 7
ಕಳೆದ 4 ವರ್ಷಗಳಿಂದ ಬಾಲಕಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯುವಕ ತನ್ನನ್ನು ಮದುವೆ ಆಗುವಂತೆ ಬಾಲಕಿಗೆ ಮನವಿ ಮಾಡಿದ್ದ ಎನ್ನಲಾಗಿದೆ.
5/ 7
ಹೀಗಾಗಿ ಸಂತ್ರಸ್ತ ಬಾಲಕಿ ಯುವಕನ ಜೊತೆ ಮದುವೆಗೆ ನಿರಾಕರಿಸಿದ್ದಲ್ಲದೇ ಆತನ ಜೊತೆ ಬಾಂಧವ್ಯವನ್ನೂ ಕಡಿದುಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಸಿಟ್ಟಾಗಿದ್ದ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
6/ 7
ಪ್ರಕರಣದ ಸಂಬಂಧ ಐಪಿಸಿ ಸೆಕ್ಷನ್ 307 ರ ಅಡಿ ಕೊಲೆ ಯತ್ನ ಹಾಗೂ ಐಪಿಸಿ ಸೆಕ್ಷನ್ 506 ಹಾಗೂ 452ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಆಯುಕ್ತ ರಾಜೇಶ್ ದಿಯೋ ತಿಳಿಸಿದ್ಧಾರೆ.
7/ 7
ಸದ್ಯ ಪರಾರಿಯಾಗಿರುವ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಪೊಲೀಸರು ವಿಶೇಷ ತಂಡ ರಚನೆ ಮಾಡಿದ್ದಾರೆ. ತಾಂತ್ರಿಕ ತಂಡದ ನೆರವನ್ನು ಪಡೆಯುವ ಜೊತೆಯಲ್ಲೇ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲನೆ ಮಾಡಿದ್ದಾರೆ.