Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

ಬರೇಲಿ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬೀದಿ ನಾಯಿಗಳ ಅಟ್ಟಹಾಸದ ಘಟನೆ ಮರೆಯುವ ಮುನ್ನವೇ 12 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಕೊಂದು ಹಾಕಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

First published:

  • 17

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ಉತ್ತರ ಪ್ರದೇಶದ ಬರೇಲಿಯ ಸಿಬಿ ಗಂಜ್ ಪ್ರದೇಶದಲ್ಲಿ ಈ ಆತಂಕಕಾರಿ ದುರ್ಘಟನೆ ಸಂಭವಿಸಿದ್ದು, ಬೀದಿ ನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾನೆ.

    MORE
    GALLERIES

  • 27

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ಮೃತ ಬಾಲಕ ಅಯಾನ್, ಖಾನಾ ಗೌಂಟಿಯಾ ಗ್ರಾಮದಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದು ಆತನ ಮೇಲೆ ದಾಳಿ ಮಾಡಿದೆ.

    MORE
    GALLERIES

  • 37

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ಆರಂಭದಲ್ಲಿ ಬೀದಿನಾಯಿಗಳು ಹಿಂಬಾಲಿಸುತ್ತಿದ್ದನ್ನು ಗಮನಿಸಿದ ಬಾಲಕ ಅಪಾಯದಿಂದ ಪಾರಾಗಲು ಓಡಲು ಶುರು ಮಾಡಿದ್ದಾನೆ. ಆದರೆ ಆತ ಕಾಲು ಜಾರಿ ನೆಲಕ್ಕೆ ಬಿದ್ದಿದ್ದು, ಆಗ ಆತನ ಮೇಲೆ ಎಲ್ಲಾ ನಾಯಿಗಳು ದಾಳಿ ಮಾಡಿವೆ.

    MORE
    GALLERIES

  • 47

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ಈ ವೇಳೆ ಅಲ್ಲೇ ಹೋಗುತ್ತಿದ್ದವರು ನಾಯಿ ದಾಳಿ ಮಾಡಿದ್ದನ್ನು ಗಮನಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ, ಅದಾಗಲೇ ಅಸ್ವಸ್ಥನಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

    MORE
    GALLERIES

  • 57

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ನಾಯಿಯ ಕೋರೆ ಹಲ್ಲುಗಳು ಬಾಲಕನ ದೇಹದಲ್ಲಿ ತೀವ್ರ ತರದ ಗಾಯ ಮಾಡಿದ್ದು, ಆ ಬಾಲಕನ ಜತೆಗಿದ್ದ ಮತ್ತೊಬ್ಬ ಬಾಲಕನ ಮೇಲೂ ನಾಯಿ ದಾಳಿ ಮಾಡಿದೆ. ಆದರೆ ಆತ ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

    MORE
    GALLERIES

  • 67

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ಉತ್ತರ ಪ್ರದೇಶದ ಬರೇಲಿಯಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಬೀದಿನಾಯಿಗಳ ಕಾಟದಿಂದ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದಳು.

    MORE
    GALLERIES

  • 77

    Dog Attack: ಉತ್ತರ ಪ್ರದೇಶದಲ್ಲಿ ಬೀದಿನಾಯಿಗಳ ಅಟ್ಟಹಾಸಕ್ಕೆ 12 ವರ್ಷದ ಬಾಲಕ ಬಲಿ!

    ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಹಲವು ಬಾರಿ ಪತ್ರ ಬರೆದಿದ್ದರೂ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

    MORE
    GALLERIES