#PHOTOS: ಮೊದಲ ಮಹಾಯುದ್ಧಕ್ಕೆ 100 ವರ್ಷ: ಘೋರ ಯುದ್ಧದ ಕರಾಳ ನೆನಪು
ವಿಶ್ವವನ್ನೇ ಬೆಚ್ಚಿ ಬೀಳಿಸಿದ ಮೊದಲ ಮಹಾಯುದ್ಧ ನಡೆದು ಇಂದಿಗೆ (ನವೆಂಬರ್ 11) ನೂರು ವರ್ಷಗಳಾಗಿದೆ. 1914 ರಿಂದ ಆರಂಭವಾದ ಯುದ್ಧವು 1918 ನವೆಂಬರ್ 11 ರಂದು ಮುಕ್ತಾಯಗೊಂಡಿತು. ಸೆಂಟ್ರಲ್ ಪವರ್ಸ್(ಜರ್ಮನಿ, ಆಸ್ಟ್ರೀಯಾ-ಹಂಗೇರಿ, ಬಲ್ಗೇರಿಯಾ ಮತ್ತು ದಿ ಒಟ್ಟೊಮನ್ ರಾಜಮನೆತನ) ಹಾಗೂ ಮೈತ್ರಿಕೂಟ ಅಥವಾ ಟ್ರಿಪಲ್ ಎಂಟೆಂಟೆ (ಗ್ರೇಟ್ ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ) ನಡುವೆ ಮೊದಲ ಮಹಾಯುದ್ಧ ಸಂಭವಿಸಿತು. ಆರಂಭದಲ್ಲಿ ಸೆಂಟ್ರಲ್ ಪವರ್ಸ್ ಜತೆ ಇದ್ದ ಇಟಲಿ 1915ರ ನಂತರ ಬ್ರಿಟನ್ ಮೈತ್ರಿಕೂಟವನ್ನು ಬೆಂಬಲಿಸಿತು. ನಂತರದ ದಿನಗಳಲ್ಲಿ ಮೈತ್ರಿಕೂಟಕ್ಕೆ ಜಪಾನ್, ಬೆಲ್ಜಿಯಂ, ಸರ್ಬಿಯಾ, ಗ್ರೀಸ್, ಮಾಂಟೆನೆಗ್ರೋ, ರೊಮಾನಿಯಾ ಹಾಗೂ ಬ್ರೆಜಿಲ್ ದೇಶಗಳು ಬೆಂಬಲ ವ್ಯಕ್ತಪಡಿಸಿದವು. 1917ರ ನಂತರ ಜರ್ಮನಿ ವಿರುದ್ಧವಾಗಿ ಯುಎಸ್ಎ ಕೂಡ ರಣರಂಗದಲ್ಲಿ ಇಳಿಯಿತು. ನಾಲ್ಕು ವರ್ಷಗಳ ಕಾಲ ನಡೆದ ಈ ಘೋರ ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಲಕ್ಷಾಂತರ ಭಾರತೀಯ ಯೋಧರು ಹೋರಾಡಿದ್ದರು. ಈ ಯುದ್ಧದಲ್ಲಿ ಮೈಸೂರು ಅರಸರ ವೀರ ಪಡೆ ಮೈಸೂರ್ ಲ್ಯಾನ್ಸರ್ಸ್ ಕೂಡ ಭಾಗವಹಿಸಿ ಶೌರ್ಯ ಪ್ರದರ್ಶಿಸಿದ್ದರು.