ಸುಡಾನ್ನಲ್ಲಿ ಸಿಲುಕಿಕೊಂಡಿರುವ ಹಕ್ಕಿ ಪಿಕ್ಕಿ ಜನಾಂಗದವರನ್ನು ರಕ್ಷಿಸುವ ಕುರಿತು ಇತ್ತೀಚಿಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ ವ್ಯಕ್ತಪಡಿಸಿದ್ದರು. ಕನ್ನಡಿಗರು ದೂರದ ಸುಡಾನ್ನಲ್ಲಿ ಅನ್ನ ನೀರು ಇಲ್ಲದೇ ಬಳಲುತ್ತಿದ್ದು, ತಕ್ಷಣ ಸೂಕ್ತ ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಹಾಗಾದರೆ ಹಕ್ಕಿ ಪಿಕ್ಕಿ ಜನಾಂಗದವರು ಸುಡಾನ್ ಸೇರಿದ್ದು ಏಕೆ? ಎಂಬ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)
ಆಫ್ರಿಕಾದ ದೇಶಗಳಲ್ಲಿ ಹಕ್ಕಿ ಪಿಕ್ಕಿ ಜನಾಂಗದವರ ಗಿಡಮೂಲಿಕೆಗೆ ಭರ್ಜರಿ ಡಿಮ್ಯಾಂಡ್ ಇದೆ. ಕಾಡುಗಳಲ್ಲಿ ಸಂಗ್ರಹಿಸಿದ ಆಯುರ್ವೇದಿಕ್ ತೈಲಗಳನ್ನು ಇವರು ಆಫ್ರಿಕಾದಲ್ಲಿ ಮಾರಾಟ ಮಾಡುತ್ತಾರೆ. ಅಲ್ಲದೇ, ಮಸಾಜ್ ಸಹ ಮಾಡಿ ಕಾಸು ಸಂಪಾದಿಸುತ್ತಾರೆ ಇವರು. ಆದರೆ ಇದ್ಯಾವುದಕ್ಕೂ ಯಾವುದೇ ಲೈಸೆನ್ಸ್ ಇಲ್ಲ, ಹೀಗಾಗಿ ಜೈಲು ಸೇರಿದ ಪ್ರಕರಣಗಳೂ ಹಲವಿವೆ. (ಸಾಂದರ್ಭಿಕ ಚಿತ್ರ)