Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವಪ್ರಸಿದ್ಧ ಮೃಗಾಲಯದಲ್ಲಿ (Mysore Zoo) ಸಂಭ್ರಮ ಮನೆ ಮಾಡಿದೆ. ಬರೋಬ್ಬರಿ ಒಂಬತ್ತು ವರ್ಷಗಳ ಬಳಿಕ ಮೃಗಾಲಯದಲ್ಲಿ ಹುಲಿ ಮರಿಗಳಿಗೆ ಜನ್ಮ ನೀಡಿದ್ರೆ, ಮತ್ತೊಂದು ಕಡೆ ಯುದ್ಧ ಪೀಡಿತ ಉಕ್ರೇನ್ ನ ಎರಡು ಸ್ಪೇಷಲ್ ಗೆಸ್ಟ್ ಮೃಗಾಲಯಕ್ಕೆ ಬರಲು ಸಜ್ಜಾಗಿವೆ.

First published:

  • 18

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಮೈಸೂರಿನ ಮೃಗಾಲಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬರೋಬ್ಬರಿ ಒಂಬತ್ತು ವರ್ಷಗಳ ನಂತ್ರ ಮೃಗಾಲಯದಲ್ಲಿ ಹುಲಿಯೊಂದು ಮೂರು ಮರಿಗಳಿಗೆ ಜನ್ಮ ನೀಡಿದೆ. ಮೃಗಾಲಯದ ಬಿಳಿ ಹುಲಿ ತಾರಾ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯಕರವಾಗಿವೆ.

    MORE
    GALLERIES

  • 28

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಗಂಡು ಹುಲಿ ರಾಕಿ ಜೊತೆ ಹೆಣ್ಣು ಹುಲಿ ತಾರಾಗೆ ಬ್ರೀಡ್ ಮಾಡಿಸಲಾಗಿತ್ತು. ಬೇರೆ ಬೇರೆ ಮೃಗಾಲಯಕ್ಕೆ ಪ್ರಾಣಿಗಳ ವಿನಿಮಯದ ಅಡಿಯಲ್ಲಿ ಹುಲಿ ಮರಿಗಳನ್ನ ನೀಡಲು ಬ್ರೀಡ್ ಮಾಡಿಸಲಾಗಿದ್ದು, ಮೂರು ತಿಂಗಳ ಬಳಿಕ ಹುಲಿ ಮರಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ ತಿಳಿಸಿದ್ರು.

    MORE
    GALLERIES

  • 38

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಮೃಗಾಲಯದಲ್ಲಿ ಒಟ್ಟು 16 ಹುಲಿಗಳಿದ್ದು ಮೈಸೂರು ಮೃಗಾಲಯ ಹುಲಿ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಾಗಿದೆ. ಇದರ ಜೊತೆ ಇನ್ನೂ, ಯುದ್ಧ ಪಿಡಿತ ಉಕ್ರೇನಿಂದ ತಾಯಿ ನಾಡಿಗೆ ವಾಪಸ್ ಬರುತ್ತಿರುವವರ ಸಾಕು ಕಾಡು ಪ್ರಾಣಿಗಳಿಗೆ ಆಶ್ರಯ ನೀಡಲು ಮೈಸೂರು ಮೃಗಾಲಯ ಮುಂದಾಗಿದೆ. ಯುದ್ಧ ಪೀಡಿತ ಉಕ್ರೇನ್ ನಲ್ಲಿರೊ ವಿದೇಶಿಗರು ವಾಪಸ್ ತಮ್ಮ ತವರಿಗೆ ಮರುಳುತ್ತಿದ್ದಾರೆ.

    MORE
    GALLERIES

  • 48

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಈ ಹಿನ್ನೆಲೆಯಲ್ಲಿ  ಉಕ್ರೇನ್ ನಲ್ಲಿ ನೆಲೆಸಿರೋ ಆಂಧ್ರ ಮೂಲದ ಪಾಟೀಲ್ ಎಂಬುವವರು ತಮ್ಮ ತವರಿಗೆ ಮರಳಲು ಸಜ್ಜಾಗಿದ್ದಾರೆ. ಹೀಗಾಗಿ ಉಕ್ರೇನ್ ನಲ್ಲಿ ನೆಲೆಸಿರೋ ಡಾ. ಪಾಟೀಲ್ ತಾವು ಸಾಕಿರೋ ಒಂದು ಬ್ಲಾಕ್ ಫ್ಯಾಂಥರ್ ಹಾಗೂ ಜಾಗ್ವಾರ್ ಗಳನ್ನು ಭಾರತಕ್ಕೆ ತಂದು ತಮ್ಮೊಟ್ಟಿಗೆ ಸಾಕಲು ಅವಕಾಶ ಅವಕಾಶ ಕೇಳಿದ್ದರು.

    MORE
    GALLERIES

  • 58

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಭಾರತದಲ್ಲಿ ವನ್ಯಜೀವಿ ಆಕ್ಟ್ ಅಡ್ಡಿ ಇರುವ ಹಿನ್ನೆಲೆ ಅವರ ಬಳಿ ಈ ಪ್ರಾಣಿಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅವಕಾಶ ಇಲ್ಲ ಎಂದು ಹೇಳಿ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿತ್ತು.  ಇದರ ಬೆನ್ನಲ್ಲೇ  ಅವರಿಗೆ ಒಂದು ಆಫರ್ ನೀಡಿದ್ದು ಭಾರತದ ಯಾವುದಾದರೂ ಒಂದು ಮೃಗಾಲಯಕ್ಕೆ ಈ ಪ್ರಾಣಿಗಳನ್ನು ನೀಡಿ ಅಲ್ಲಿ ಸಾಕಲು ಅವಕಾಶ ಕೊಡುವುದಾಗಿ ತಿಳಿಸಿತ್ತು.

    MORE
    GALLERIES

  • 68

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಇದರ ಅನ್ವಯ ಈಗ ಡಾ. ಪಾಟೀಲ್ ಭಾರತ ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಹೀಗಾಗಿ ಮೈಸೂರು ಮೃಗಾಲಯಕ್ಕೆ ನೀಡಲು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    MORE
    GALLERIES

  • 78

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಇನ್ನೂ ಈ ವಿಚಾರದಲ್ಲಿ ಮೈಸೂರು ಮೃಗಾಲಯವು ಆಸಕ್ತಿ ತೋರಿದ್ದು. ಈಗಾಗಲೇ ಮೈಸೂರು ಮೃಗಾಲಯದಲ್ಲಿ ಜಾಗ್ವಾರ್ ಹಾಗೂ ಬ್ಯಾಕ್ ಪ್ಯಾಂಥರ್ ಇದ್ದು ಅವುಗಳ ಜೊತೆಯಲ್ಲಿ ಈ ಪ್ರಾಣಿಗಳನ್ನು ಇನ್ನೂ ಉತ್ತಮವಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.

    MORE
    GALLERIES

  • 88

    Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

    ಇದರ ಜೊತೆ ಮೈಸೂರಿನ ಮೃಗಾಲಯವು ಸಂತಾನೋತ್ಪತ್ತಿ, ವಾಸಕ್ಕೆ ಮೈಸೂರು ಮೃಗಾಲಯ ಪೂರಕವಾಗಿದೆ. ಎನ್ನುತ್ತಿದ್ದಾರೆ‌. ಒಟ್ಟಿನಲ್ಲಿ ಮೃಗಾಲಯದ ಹೊಸ ಅತಿಥಿ ಹುಲಿ ಮರಿಗಳ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಿ, ಬ್ಲಾಕ್  ಫ್ಯಾಂಥರ್, ಜಾಗ್ವಾರ್ ಮೃಗಾಲಯಕ್ಕೆ  ಬಂದ್ರೆ ಪ್ರವಾಸಿಗರ ಆಕರ್ಷಣೆ ಮತ್ತಷ್ಟು ಹೆಚ್ಚಲಿದೆ.

    MORE
    GALLERIES