ಮೈಸೂರು ಅಂದ ತಕ್ಷಣ ಅರಮನೆಯ ಜೊತೆಗೆ ನೆನಪಿಗೆ ಬರುವ ಇನ್ನೊಂದು ಪ್ರಮುಖ ಹೆಸರು ಮೈಸೂರು ಪಾಕ್. ಈ ಅದ್ಭುತ ಸಿಹಿ ತಿಂಡಿಯನ್ನು ಸವಿಯದವರು ಯಾರೂ ಇಲ್ಲವೆನೋ!? ಅಷ್ಟು ಫೇಮಸ್, ಅಷ್ಟು ರುಚಿಯ ಈ ಸಿಹಿ ತಿಂಡಿಯ ಕುರಿತು ನಿಮಗೆ ತಿಳಿದಿರದ ವಿಷಯ ಇಲ್ಲಿದೆ.
2/ 7
ಏನೇ ಸಿಹಿ ಸುದ್ದಿಯಿರಲಿ, ಸಿಹಿ ಖರೀದಿಸಬೇಕು ಎಂದುಕೊಂಡರೆ ಮೊದಲು ನೆನಪಾಗುವುದೇ ಮೈಸೂರು ಪಾಕ್. ಹಾಗಾದರೆ ಈ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದೇ ಹೇಗೆ ಹೆಸರು ಬಂತು? ಇದರ ಸೃಷ್ಟಿಕರ್ತ ನಳ ಮಹಾರಾಜರು ಯಾರು ಎಂದು ನಾವು ಹೇಳ್ತೀವಿ ಕೇಳಿ.
3/ 7
ಅದು ಮೈಸೂರು ಅರಮನೆ. ಮಹಾರಾಜ ಕೃಷ್ಣರಾಜ ಒಡೆಯ ಅವರ ಆಡಳಿತದ ಕಾಲ. ಕಾಕಾಸುರ ಮಾದಪ್ಪ ಎಂಬ ಅಡುಗೆ ಭಟ್ಟರು ಅರಮನೆಯ ಪಾಕಶಾಲೆಯಲ್ಲಿದ್ದರು.
4/ 7
ಒಂದಿಲ್ಲೊಂದು ದಿನ ಮೈಸೂರು ಮಹಾರಾಜರು ವಿಶೇಷ ಸಂದರ್ಭವೊಂದಕ್ಕೆ ರುಚಿಯಾದ ಸಿಹಿ ತಿಂಡಿ ತಯಾರಿಸಲು ಹೇಳಿದರು. ಮುಂದೆ ನಡೆದದ್ದೇ ಇತಿಹಾಸ!
5/ 7
ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಸೇರಿಸಿ ಮೃದುವಾದ ಪಾಕ ತಯಾರಿಸಿ ಸಿಹಿ ತಿಂಡಿಯೊಂದನ್ನು ತಯಾರಿಸಿದರು. ಈ ಹೊಸ ಪಾಕಕ್ಕೆ ಹೆಸರು ಹುಡುಕುವಾಗ ಮಾದಪ್ಪನ ಹೆಸರು ಮನಸಲ್ಲಿ ಮೂಡಿತು. ತಕ್ಷಣ ಅವರ ಮನಸಲ್ಲಿ ಹೊಳೆದ ಹೆಸರೇ ಮೈಸೂರು ಪಾಕ. ಅದೇ ಮುಂದೆ ಮೈಸೂರು ಪಾಕ್.
6/ 7
ಮೈಸೂರು ಪಾಕ್ ಮೊದಲ ಬಾರಿಗೆ ತಯಾರಾದದ್ದು 1935ರಲ್ಲಿ. ಅಂದಿನಿಂದ ಇಂದಿನವರೆಗೆ ಯಾರ ಆಡಳಿತದ ಸರ್ಕಾರವೇ ಬರಲಿ ಮೈಸೂರು ಪಾಕ್ ಮಾತ್ರ ತನ್ನ ಹವಾ ಮೆಂಟೇನ್ ಮಾಡಿದೆ.
7/ 7
ಅಷ್ಟೇ ಅಲ್ಲದೇ ಕಾಕಾಸುರ ಮಾದಪ್ಪ ಭಟ್ಟರ ಮನೆತನದ ಮೈಸೂರು ಪಾಕ್ ಅಂಗಡಿ ಈಗಲೂ ಮೈಸೂರಲ್ಲಿ ಇದೆ. ಈ ಮನೆತನದ ಗುರು ಸ್ವೀಟ್ಸ್ ಅಂಗಡಿಯಿಂದಲೇ ಮೈಸೂರು ಪಾಕ್ ಖರೀದಿಸುವವರು ಇದ್ದಾರೆ.
First published:
17
Mysuru Pak History: ಕಾಕಾಸುರ ಮಾದಪ್ಪ ಭಟ್ಟರ ನಳಪಾಕ!