ಹಲವೆಡೆ ವಿದ್ಯುತ್ ಉಪಕರಣಗಳಿಗೆ ಸಿಡಿಲು ಬಡಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇನ್ನು ತೆಂಗು, ಕಂಗು ಮರಗಳು ಧರಾಶಾಹಿಯಾದ ಪರಿಣಾಮ ಕೃಷಿಕರು ಅಪಾರ ಪ್ರಮಾಣದ ನಷ್ಟ ಅನಭವಿಸುವಂತಾಗಿದೆ. ಗಾಳಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಲವೆಡೆ ವಿದ್ಯುತ್ ಕೈ ಕೊಟ್ಟಿತ್ತು. ಕೆಲವೆಡೆ ತಡರಾತ್ರಿ ವಿದ್ಯುತ್ ವಾಪಸ್ ಬಂದಿವೆ. ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಜಾಗೃತರಾಗಿದ್ದು, ಎಲ್ಲೆಲ್ಲ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಅಲ್ಲೆಲ್ಲ ಭೇಟಿ ನೀಡಿ ಸರಿಪಡಿಸುವಲ್ಲಿ ನಿರತರಾಗಿದ್ದಾರೆ. (ಸಾಂದರ್ಭಿಕ ಚಿತ್ರ)