Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

ಮಾವಿನ ಹಣ್ಣಿನ ಸೀಸನ್​ ಎಂದರೆ ಜನರಿಗೆ ಅದೇನೋ ಬಹಳ ಇಷ್ಟ. ರುಚಿ ರುಚಿಯಾದ ಮಾವಿನ ಹಣ್ಣಿಗಾಗಿ ಊರೆಲ್ಲಾ ಹುಡುಕುತ್ತಾರೆ. ಆದರೆ ಈ ಮೇಳಗಳ ಕಾರಣದಿಂದ ಒಂದೇ ಸೂರಿನಡಿ ವಿಭಿನ್ನ ಮಾವಿನ ಹಣ್ಣುಗಳು ಸಿಗುತ್ತವೆ. ಸದ್ಯ ಮೈಸೂರಿನಲ್ಲಿ ಸಹ ಮಾವಿನ ಮೇಳ ಆರಂಭವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

First published:

  • 17

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ಬೇಸಿಗೆ ಕಾಲ ಬಂತು ಎಂದರೆ ಸಾಕು ಮಾವಿನ ಹಣ್ಣಿನ ಸೀಸನ್ ಶುರುವಾದ ಹಾಗೆ. ವಿಭಿನ್ನ ರೀತಿಯ ಮಾವಿನ ಹಣ್ಣುಗಳನ್ನು ಸವಿಯಲು ಜನ ಕಾತುರದಿಂದ ಈ ಸೀಸನ್​ಗಾಗಿ ಕಾಯುತ್ತಿರುತ್ತಾರೆ. ಈ ನಡುವೆ ಮಾವಿನ ಮೇಳಗಳು ಸಹ ಜನರ ಗಮನ ಸೆಳೆದಿದ್ದು, ರಾಜ್ಯ ಅನೇಕ ಕಡೆಗಳಲ್ಲಿ ಮಾವಿನ ಮೇಳ ಆರಂಭವಾಗಿದೆ.

    MORE
    GALLERIES

  • 27

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ಈಗಾಗಲೇ ಕೊಡಗು ಹಾಗೂ ಬೆಂಗಳೂರಿನಲ್ಲಿ ಮಾವಿನ ಮೇಳ ಆರಂಭವಾಗಿದ್ದು, ಮೈಸೂರಿನಲ್ಲಿ ಸಹ ಮಾವಿನ ಮೇಳ ಶುರುವಾಗಿದೆ. ಮೂರು ದಿನಗಳ ಕಾಲ ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ ಮಾವು ಮೇಳ ನಡೆಯಲಿದ್ದು, ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳನ್ನು ಖರೀದಿಸಲು ಉತ್ತಮ ಅವಕಾಶ ಇದಾಗಿದೆ.

    MORE
    GALLERIES

  • 37

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ಮೈಸೂರಿನ ಕುಪ್ಪಣ್ಣ ಪಾರ್ಕ್‌ನಲ್ಲಿ ಈ ಮಾವಿನ ಮೇಳವನ್ನು ಆಯೋಜಿಸಲಾಗಿದ್ದು, ಸುಮಾರು 24 ಮಳಿಗೆಗಳನ್ನು ಈ ಬಾರಿ ಹಾಕಲಾಗಿದೆ. ಈ ಬಾರಿ ಹಣ್ಣಿನ ಇಳುವರಿ ಕಡಿಮೆ ಆಗಿರುವುದರಿಂದ ದರದಲ್ಲಿ ಕೆಲ ವ್ಯತ್ಯಾಸ ಆಗಲಿದೆ. ಆದರೆ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುವುದು ಗ್ಯಾರಂಟಿ.

    MORE
    GALLERIES

  • 47

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ಇನ್ನು ಈ ಬಾರಿ ಮಾನಕೂರ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ಆಮ್ಲೆಟ್, ಚೈತ್ರಪೈರಿ, ದಿಲ್‌ಪಸಂದ್ , ಸೇಲಂ, ಶಿರಸಿ ಲೋಕಲ್, ರತ್ನಗಿರಿ (ಆಲನ್ಸ್), ಬಾದಾಮಿ, ರಸಪುರಿ, ಮಲಗೋವ, ಮಲ್ಲಿಕಾ, ಸೇಂದೂರಾ, ತೋತಾಪುರಿ, ಸೇರಿದಂತೆ 40ಕ್ಕೂ ಹಚ್ಚು ವಿಧದ ಮಾವಿನ ಹಣ್ಣುಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ.

    MORE
    GALLERIES

  • 57

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ರಾಸಾಯನಿಕಯುಕ್ತ ಮಾವಿನ ಹಣ್ಣುಗಳ ಆರ್ಭಟ ಹೆಚ್ಚಿದೆ. ಬೇಗ ಹಣ್ಣಾಗಲಿ ಎಂದು ಕೆಮಿಕಲ್​ಗಳನ್ನು ಬಳಸಲಾಗುತ್ತದೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಈ ದೃಷ್ಟಿಯಿಂದ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ರಾಸಾಯನಿಕ ರಹಿತ ಹಣ್ಣುಗಳು ಸಿಗಲಿ ಎಂದು ಈ ಮೇಳ ಆಯೋಜಿಸಲಾಗಿದೆ.

    MORE
    GALLERIES

  • 67

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ರಾಜ್ಯದ ವಿವಿಧ ಜಿಲ್ಲೆಯಿಂದ ಇಲ್ಲಿ ಮಾವು ಬೆಳೆಗಾರರು ಬರಲಿದ್ದು, ಹೆಚ್ಚಾಗಿ ಮೈಸೂರು ಭಾಗದ ರೈತರಿಗೆ ಆದ್ಯತೆ ನೀಡಲಾಗಿದೆ. ಅಲ್ಲದೇ, ಈ ಮಾವಿನಕಾಯಿಗಳನ್ನು ರಾಸಾಯನಿಕ ವಸ್ತು ಬಳಸಿ ಹಣ್ಣು ಮಾಡಲಾಗಿದ್ದಾ ಎಂದೆಲ್ಲಾ ಪರೀಕ್ಷೆ ಮಾಡಿದ ನಂತರವೇ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ.

    MORE
    GALLERIES

  • 77

    Mysuru: ಎಲ್ಲೆಲ್ಲೂ ಮಾವಿನ ಘಮಲು, ಮೈಸೂರಿನಲ್ಲೂ ಆರಂಭವಾಯ್ತು ಹಣ್ಣಿನ ಮೇಳ

    ಇಲ್ಲಿ ಮಾರಾಟಕ್ಕೆ ಬರುವ ರೈತರಿಗೆ ಸಹ ಮೊದಲೇ ಸೂಚನೆ ನೀಡಲಾಗಿದ್ದು, ದರವನ್ನು ಸಹ ನಿಗದಿ ಮಾಡಲಾಗಿದೆ. ಇನ್ನು ಈ ಮೇಳದಲ್ಲಿ ವಿವಿಧ ಗಿಡಗಳನ್ನು ಸಹ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ರೈತರಿಗೆ ಮಾತ್ರವಲ್ಲದೇ ಗಿಡದ ಬಗ್ಗೆ ಆಸಕ್ತಿ ಇರುವವರಿಗೆ ಇದು ಒಳ್ಳೆಯ ಅವಕಾಶ ಎನ್ನಬಹುದು.

    MORE
    GALLERIES