Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

ಮಂಗಳೂರಿಗೆ ನೆರೆ ರಾಜ್ಯ ಕೇರಳದ ಮೂಲಕ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಲಿದೆ. ಕೇರಳದ ಶೋರ್ನೂರ್-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಆರಂಭವಾಗಲಿರುವ ಕುರಿತು ವರದಿಯಾಗಿದೆ.

First published:

  • 18

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಕರ್ನಾಟಕಕ್ಕೆ 2ನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಆಗಮಿಸೋದು ಪಕ್ಕಾ ಆಗಿದೆ. ಕರ್ನಾಟಕದ ಕರಾವಳಿ ಭಾಗಕ್ಕೆ ವಂದೇ ಭಾರತ್ ರೈಲು ಸೇವೆ ದೊರೆಯಲಿದೆ. ಈ ರೈಲು ಸೇವೆಗೆ ಅಗತ್ಯವಿರುವ ತಯಾರಿ ಆರಂಭದ ಮೂಲಕ ಭಾರತೀಯ ರೈಲ್ವೆ ಖುಷಿ ಸುದ್ದಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಈಗಾಗಲೇ ಭಾರತೀಯ ರೈಲ್ವೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ನಿರ್ವಹಣೆಗಾಗಿ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಟೆಂಡರ್ ಕರೆದಿದೆ ಎಂದು ವರದಿಯಾಗಿದೆ.

    MORE
    GALLERIES

  • 38

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಭಾರತೀಯ ರೈಲ್ವೆ ಮಂಗಳೂರಿನಲ್ಲಿ ವಂದೇ ಭಾರತ್ ರೈಲು ನಿರ್ವಹಣೆಗೆ ಕರೆದಿರುವ ಟೆಂಡರ್​ಗೆ ಏಪ್ರಿಲ್ 14ರವರೆಗೆ ಟೆಂಡರ್ ಸಲ್ಲಿಸಬಹುದಾಗಿದೆ. ಈ ದಿನಾಂಕದ ನಂತರ ಒಟ್ಟು 6 ತಿಂಗಳಲ್ಲಿ ಕಾಮಗಾರಿ ಮುಗಿಸಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಮಂಗಳೂರಿಗೆ ನೆರೆ ರಾಜ್ಯ ಕೇರಳದ ಮೂಲಕ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಲಿದೆ. ಕೇರಳದ ಶೋರ್ನೂರ್-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಆರಂಭವಾಗಲಿರುವ ಕುರಿತು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಇತ್ತ ಚೆನ್ನೈ-ಬೆಂಗಳೂರು ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಈಗಾಗಲೇ ಆರಂಭವಾಗಿರೋದು ತಿಳಿದಿರೋ ವಿಚಾರವೇ.ಈ ರೈಲಿನ ಕುರಿತು ಇನ್ನೊಂದು ಮಹತ್ವದ ಅಪ್​ಡೇಟ್ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ನೈಋತ್ಯ ರೈಲ್ವೆಯ ಬೆಂಗಳೂರು ವಲಯ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಸದ್ಯ ಚೆನ್ನೈ-ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಕೆ. ಆರ್. ಪುರ-ಜೋಲಾರಪಟ್ಟಿ ಮಧ್ಯೆ ಗಂಟೆಗೆ 110 ಕಿ. ಮೀ. ವೇಗದಲ್ಲಿ ಚಲಿಸುತ್ತದೆ. ಈ ಮಾರ್ಗದ ರೈಲು ವೇಗವನ್ನು ಹೆಚ್ಚಿಸುವುದಾಗಿ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Vande Bharat Express Train: ಕರ್ನಾಟಕದ ಈ ನಗರಕ್ಕೆ 2ನೇ ವಂದೇ ಭಾರತ್ ರೈಲು ಬರೋದು ಪಕ್ಕಾ

    ಬೆಂಗಳೂರು ಮತ್ತು ಹೈದರಾಬಾದ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES