Matsyagandha Express: ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟ ಪ್ರಖ್ಯಾತ ರೈಲಿಗೆ 25ರ ಪ್ರಾಯ!
ಕರ್ನಾಟಕದ ಕರಾವಳಿ ಮತ್ತು ಮುಂಬೈ ನಡುವಿನ ಸಂಪರ್ಕ ಸೇತುವೆಯಂತಿರುವ ಪ್ರಸಿದ್ಧ ರೈಲಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ! ಹೌದು, ಮಂಗಳೂರು-ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ರೈಲಿಗೆ ಬರೋಬ್ಬರಿ 25 ವರ್ಷ ತುಂಬಿದೆ.
ಕರ್ನಾಟಕದ ಕರಾವಳಿ ಮತ್ತು ಮುಂಬೈ ನಡುವಿನ ಸಂಪರ್ಕ ಸೇತುವೆಯಂತಿರುವ ಪ್ರಸಿದ್ಧ ರೈಲಿಗೆ ಈಗ ಬೆಳ್ಳಿ ಹಬ್ಬದ ಸಂಭ್ರಮ! ಹೌದು, ಮಂಗಳೂರು-ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ರೈಲಿಗೆ ಬರೋಬ್ಬರಿ 25 ವರ್ಷ ತುಂಬಿದೆ. (ಸಾಂದರ್ಭಿಕ ಚಿತ್ರ)
2/ 7
ಇಷ್ಟೇ ಅಲ್ಲ, ಕೊಂಕಣ ರೈಲ್ವೆಯೂ ಸಹ ಆರಂಭವಾಗಿ ಒಟ್ಟು 25 ವರ್ಷಗಳು ತುಂಬಿದೆ. ಕೊಂಕಣ ರೈಲ್ವೆಯ ಆರಂಭದಲ್ಲೇ ಮತ್ಸ್ಯಗಂಧ ರೈಲನ್ನು ಸಹ ಆರಂಭಿಸಲಾಗಿತ್ತು. 1, 1998 ರ ಮೇ ತಿಂಗಳಿನಲ್ಲಿ ಮತ್ಸ್ಯಗಂಧ ರೈಲು ಸಂಚಾರ ಶುರು ಮಾಡಿತು. (ಸಾಂದರ್ಭಿಕ ಚಿತ್ರ)
3/ 7
ಕರ್ನಾಟಕದ ಕರಾವಳಿ ಭಾಗದ ಸಾವಿರಾರು ಜನರು ಮುಂಬೈನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಮತ್ಸ್ಯಗಂಧ ರೈಲು ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. (ಸಾಂದರ್ಭಿಕ ಚಿತ್ರ)
4/ 7
ಅಲ್ಲದೇ ಅತೀ ಹೆಚ್ಚು ಜನರು ಅವಲಂಬಿಸಿರುವ ಮಂಗಳೂರು-ಮುಂಬೈ ನಡುವಿನ ಮಾರ್ಗದಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)
5/ 7
ಮತ್ಸ್ಯ ಗಂಧ ರೈಲಿನ ಹಳಿ ದ್ವಿಗುಣಗೊಳಿಸಬೇಕು. ಈ ರೈಲಿಗೆ ಎಲ್ಎಚ್ಬಿ ಅಥವಾ ಆಧುನಿಕ ಕೋಚ್ ಅಳವಡಿಸಬೇಕು. ಕೊಂಕಣ ರೈಲ್ವೆ ಆಧುನಿಕ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಗಣೇಶ ಪುತ್ರನ್ ಆಗ್ರಹಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಮುಂಬೈನಿಂದ ಕರ್ನಾಟಕದ ಕರಾವಳಿಯಲ್ಲಿರುವ ಮನೆಗೆ, ಮನೆಯಿಂದ ಮತ್ತೆ ಕರ್ಮಭೂಮಿಗೆ ಕರೆದೊಯ್ಯುವ ಮತ್ಸ್ಯಗಂಧ ಎಕ್ಸ್ಪ್ರೆಸ್ ಬಗ್ಗೆ ಕರಾವಳಿ ಭಾಗದ ಜನತೆಗೆ ಒಂಥರಾ ಬಿಡಿಸಲಾರದ ಅನುಬಂಧವಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಮಂಗಳೂರು ಮತ್ತು ಮುಂಬೈ ನಡುವಿನ ಸಂಪರ್ಕ ಸೇತುವಿನ ಮುಂದಿನ ಭವಿಷ್ಯ ಉಜ್ವಲವಾಗಲಿ. ಕರಾವಳಿ ಜನತೆಗೆ ಇನ್ನಷ್ಟು ಅನುಕೂಲವಾಗಲಿ ಎಂಬ ಆಶಯ ವ್ಯಕ್ತವಾಗಿದೆ. (ಸಾಂದರ್ಭಿಕ ಚಿತ್ರ)
First published:
17