Mangaluru News: ಮಂಗಳೂರಿನಲ್ಲಿ 24 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತ!
ತುಂಬೆ ಡ್ಯಾಂನಿಂದ ಸರಬರಾಜು ಆಗುವ ನೀರಿನ ಕೊಳವೆ ಮಾರ್ಗದಲ್ಲಿ ಸೋರಿಕೆ ಉಂಟಾದ ಹಿನ್ನೆಲೆ ತುರ್ತು ಕಾಮಗಾರಿ ನಡೆಯಬೇಕಿದೆ. ಯಾವ ಏರಿಯಾದಲ್ಲಿ ಯಾವ ಸಮಯಕ್ಕೆ ನೀರಿನ ಪೂರೈಕೆ ಇರಲ್ಲ ಎಂಬ ಮಾಹಿತಿ ಇಲ್ಲಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. (ಸಾಂದರ್ಭಿಕ ಚಿತ್ರ)
2/ 9
ಹೀಗಾಗಿ ಮಂಗಳೂರು ನಗರದ (Mangaluru News) ವಿವಿಧೆಡೆ ಭಾನುವಾರ (ಜುಲೈ 17) ಮುಂಜಾನೆಯಿಂದ 24 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)
3/ 9
ತುಂಬೆ ಡ್ಯಾಂ ನಿಂದ ಸರಬರಾಜು ಮಾಡುವ ಮುಖ್ಯ ಕೊಳವೆ ಕೂಳೂರು ಬಳಿಯ ಸ್ಕಂದ ಹೊಟೇಲ್, ಕೊಟ್ಟಾರ ಚೌಕಿ ಸೂಪರ್ ಸ್ಟೀಲ್ ಬಳಿ ಸೋರಿಕೆ ಉಂಟಾಗಿರುವ ಹಿನ್ನೆಲೆ ತುರ್ತಾಗಿ ಕಾಮಗಾರಿಗೆ ಪಾಲಿಕೆಯು ಮುಂದಾಗಿದೆ. (ಸಾಂದರ್ಭಿಕ ಚಿತ್ರ)
4/ 9
ಹಾಗಾದರೆ ಮಂಗಳೂರು ನಗರದಲ್ಲಿ ಜುಲೈ 17ರಂದು ಯಾವ ಏರಿಯಾದಲ್ಲಿ ಯಾವ ಸಮಯದಲ್ಲಿ ನೀರು ಪೂರೈಕೆ (Mangaluru Water Supply) ಇರುವುದಿಲ್ಲ? ಎಲ್ಲ ವಿವರ ನಿಮಗಾಗಿಯೇ ಇಲ್ಲಿದೆ ನೋಡಿ. (ಸಾಂದರ್ಭಿಕ ಚಿತ್ರ)
5/ 9
ಜುಲೈ 17 ರ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಜುಲೈ 18 ರ ಬೆಳಿಗ್ಗೆ 6 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)