Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

Music Program: ಸಂಗೀತ ಎಂದರೆ ಹಲವಾರು ಜನರಿಗೆ ಬಹಳ ಇಷ್ಟ. ಅದ್ಭುತ ಗಾಯಕರ ಸಂಗೀತ ಕೇಳಲು ದೂರದೂರುಗಳಿಗೆ ಹೋಗುತ್ತಾರೆ. ನೀವು ಸಹ ಸಂಗೀತ ಪ್ರಿಯರಾಗಿದ್ದರೆ ಹಾಗೂ ಕಲಿಯುವ ಆಸಕ್ತಿ ಇದ್ದರೆ ಬಹಳ ವಿಶೇಷ ಶಿಬಿರದ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಇನ್ನೊಂದು ಬಹಳ ಸುಂದರವಾದ ಸ್ಥಳ. ಇಲ್ಲಿ ವರ್ಷಕೊಮ್ಮೆ ಎಲ್ಲರ ಕಣ್ಣು ಅರಳಿಸುವಷ್ಟು ವಿಭಿನ್ನವಾಗಿ ಸಂಗೀತ ಶಿಬಿರ ನಡೆಸಲಾಗುತ್ತದೆ. ಈ ಶಿಬಿರಲ್ಲಿ ಘಟಾನುಘಟಿ ಗಾಯಕರು ಹಾಗೂ ಕಲಾವಿದರು ಬಂದು ಮಾರ್ಗದರ್ಶನ ಮಾಡುತ್ತಾರೆ.

    MORE
    GALLERIES

  • 27

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಧರ್ಮಸ್ಥಳ-ನೆಲ್ಲಿಯಡಿಯಲ್ಲಿರುವ ದೂರದ ನಿಡ್ಲೆ ಗ್ರಾಮದಲ್ಲಿ ಪ್ರತಿವರ್ಷ ವಿಶೇಷವಾದ ಸಂಗೀತ ಶಿಬಿರವನ್ನು ಆಯೋಜನೆ ಮಾಡಲಾಗುತ್ತದೆ. ಅದಕ್ಕೆ ಕರುಣಬಿತ್ತಿಲ್ ಶಿಬಿರ ಎಂದು ಹೆಸರು. ಈ ಶಿಬಿರಕ್ಕೆ ಸೇರಲು ಬಹಳ ದೂರದ ಊರುಗಳಿಂದ ಸಂಗೀತಾಸಕ್ತರು ಬರುತ್ತಾರೆ. ಈಗಾಗಲೇ ಅಂದರೆ ಮೇ 24ರಿಂದ ಈ ಶಿಬಿರ ಆರಂಭವಾಗಿದೆ.

    MORE
    GALLERIES

  • 37

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಈ ಶಿಬಿರ ಸಂಪೂರ್ಣವಾಗಿ ವಿಶೇಷವಾಗಿದ್ದು, ಈ ಶಿಬಿರಲ್ಲಿ ಲಾಲ್ಗುಡಿ ಜಿ.ಜಯರಾಮನ್, ಎಂ.ಬಾಲಮುರಳಿಕೃಷ್ಣ, ಉಮಯಲಾಪುರಂ ಕೆ.ಶಿವರಾಮನ್, ಟಿ.ವಿ.ಗೋಪಾಲಕೃಷ್ಣನ್, ಎಂ.ಚಂದ್ರಶೇಖರ್, ವಿ.ವಿ.ಸುಬ್ರಮಣ್ಯಂ, 'ಬಾಂಬೆ' ಜಯಶ್ರೀ, ಟಿ.ಎಂ.ಕೃಷ್ಣ, ಅಭಿಷೇಕ್ ರಘುರಾಮ್ ರಂತಹ ಹಿರಿಯ ಕಲಾವಿದರು ಭಾಗವಹಿಸಿ ತರಬೇತಿ ನೀಡುತ್ತಾರೆ.

    MORE
    GALLERIES

  • 47

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಹಾಗೆಯೇ ಈ ಬಾರಿ ಭಾಗವಹಿಸುವ ಸಂಗೀತ ಪ್ರಿಯರಿಗೆ ರಾಜ್‌ಕುಮಾರ್ ಭಾರತಿ, ಆರ್‌ಎನ್ ಶ್ರೀಲತಾ, ಸುಬ್ರಮಣ್ಯಂ, ಪಿ.ಉನ್ನಿಕೃಷ್ಣನ್, ರಾಧಾ ವೆಂಕಟರಮಣ, ಶ್ರೀ ರಘುರಾಮ್, ತಿರುಮಲೆ ಶ್ರೀನಿವಾಸ್, ಅನೂರ್ ಅನಂತಕೃಷ್ಣ ಶರ್ಮಾ ಮತ್ತು ವೀಣಾ ಸುರೇಶ್ ಮಾರ್ಗದರ್ಶನ ನೀಡಲಿದ್ದಾರೆ.

    MORE
    GALLERIES

  • 57

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಸುಮಾರು 5 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಸಂಗೀತ ಪರಿಚಯವಿಲ್ಲದವರಿಗೂ ಸಹ ಸಂಗೀತ ಕಲಿಸಲಾಗಿದೆ. ಕಳೆದ ಬಾರಿ 40 ಹೆಚ್ಚು ಜನರಿಗೆ ಕರ್ನಾಟಕ ಸಂಗೀತದ ಅರಿವಿರಲಿಲ್ಲ. ಆದರೆ ಈ ಶಿಬಿರದ ಕಾರಣದಿಂದ ಅದನ್ನು ಕಲಿತಿದ್ದರು ಎಂದು ಶಿಬಿರದ ಆಯೋಜಕರು ತಿಳಿಸಿದ್ದಾರೆ.

    MORE
    GALLERIES

  • 67

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಪಿಟೀಲು ವಾದಕ ವಿದ್ವಾನ್ ವಿಟ್ಲ ರಾಮಮೂರ್ತಿಯವರು 2000ನೇ ಇಸವಿಯಲ್ಲಿ ಈ ಸಂಗೀತ ಶಿಬಿರವನ್ನು ಆರಂಭಿಸಿದ್ದು, ಈ 23 ವರ್ಷಗಳಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತ ಕಲಿತಿದ್ದಾರೆ. ಅಲ್ಲದೇ, ಈ ಬಾರಿ ಸಹ ಸುಮಾರು 250 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದು, ಯುಸ್​ನಿಂದ ಸಹ ಈ ಶಿಬಿರಕ್ಕೆ ಆಗಮಿಸುತ್ತಿದ್ದಾರೆ.

    MORE
    GALLERIES

  • 77

    Music Camp: ಆರಂಭವಾಗಿದೆ ಕರುಣಬಿತ್ತಿಲ್ ಸಂಗೀತ ಶಿಬಿರ, ಇಲ್ಲಿದೆ ನೋಡಿ ಮಾಹಿತಿ

    ಇನ್ನು ಈ ಶಿಬಿರದಲ್ಲಿ ಬರೀ ಸಂಗೀತ ಮಾತ್ರವಲ್ಲದೇ, ಯಕ್ಷಗಾನ, ತಾಳಮದ್ದಳೆ, ಜಾದೂ ಪ್ರದರ್ಶನ ಮತ್ತು ರಸಪ್ರಶ್ನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲದೇ, ಮೇ 28 ರಂದು ಈ ವರ್ಷದ ಶಿಬಿರ ಮುಗಿಯಲಿದ್ದು, ಇದೊಂದು ಉತ್ತಮ ಅವಕಾಶ ಎನ್ನಬಹುದು.

    MORE
    GALLERIES