Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯ ಧರ್ಮಸ್ಥಳದ ಕುರಿತು ಮಹತ್ವದ ಸೂಚನೆಯೊಂದನ್ನು ನೀಡಲಾಗಿದೆ. 

First published:

  • 17

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಕರಾವಳಿಯಲ್ಲಿ ದಿನೇ ದಿನೇ ಬಿಸಿಲ‌ ಬೇಗೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯ ಧರ್ಮಸ್ಥಳದ ಕುರಿತು ಮಹತ್ವದ ಸೂಚನೆಯೊಂದನ್ನು ನೀಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಬಿಸಿಲಿನ ಝಳದಿಂದ ನೀರಿನ ಹರಿವು ಕಡಿಮೆಯಾಗಿದೆ. ಹೀಗಾಗಿ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವಾಗ ಶ್ಯಾಂಪೂ ಅಥವಾ ಸೋಪನ್ನು ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಈ ಕುರಿತು ಅಧಿಕೃತ ಸೂಚನೆ ನೀಡಿರುವ ಧರ್ಮಸ್ಥಳ ಗ್ರಾಮ ಪಂಚಾಯತ್, ನೇತ್ರಾವತಿ ಸ್ನಾನಘಟ್ಟ, ನೇತ್ರಾನಗರ, ಹರಿಕೆಮಂಡೆಯ ಸುತ್ತಮುತ್ತಲಿನ ಅಂಗಡಿಗಳಲ್ಲಿ ಶ್ಯಾಂಪೂ ಅಥವಾ ಸೋಪು ಮಾರದಂತೆ ಸೂಚನೆ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಈಗಾಗಲೇ ಬೇಸಿಗೆಯ ಕಾರಣದಿಂದ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಶಾಂಪೂ ಅಥವಾ ಸೋಪನ್ನು ಬಳಸಿದರೆ ಶಾಂಪೂ ಅಥವಾ ಸೋಪಿನ ನೊರೆ, ಪ್ಯಾಕೆಟ್​ಗಳು ನದಿಯಲ್ಲೇ ಸಂಗ್ರವಾಗುತ್ತವೆ. ಇದರಿಂದ ಮಾಲಿನ್ಯ ಉಂಟಾಗುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಹೀಗಾಗಿ ನೇತ್ರಾವತಿ ಸ್ನಾನಘಟ್ಟ ಕಲುಷಿತವಾಗದಂತೆ ತಡೆಯಲು ಧರ್ಮಸ್ಥಳ ಗ್ರಾಮ ಪಂಚಾಯತ್ ಈ ಮಹತ್ವದ ಸೂಚನೆ ಮಾಡಿದೆ. ಧರ್ಮಸ್ಥಳ ಶ್ರಿ ಮಂಜುನಾಥೇಶ್ವರನ ಭಕ್ತರಲ್ಲಿ ನೇತ್ರಾವತಿ ನದಿಯ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿಕೊಂಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಧರ್ಮಸ್ಥಳ ಗ್ರಾಮ ಪಂಚಾಯತ್ ಅಂಗಡಿಗಳ ಮಾಲೀಕರಿಗೆ ಈ ಸೂಚನೆಯನ್ನು ನೀಡಿದೆ. ಈ ಸೂಚನೆಯ ಪ್ರತಿ ಇಲ್ಲಿದೆ ನೋಡಿ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Dharmasthala: ಧರ್ಮಸ್ಥಳದಲ್ಲಿ ಈ ತಪ್ಪು ಮಾಡಲೇಬೇಡಿ

    ಒಟ್ಟಾರೆ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ಪವಿತ್ರ ಸ್ನಾನ ಮಾಡುವ ಮುನ್ನ ಭಕ್ತಾದಿಗಳು ಸಹ ಈ ಸೂಚನೆಯನ್ನು ಪಾಲಿಸಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES