ಕರಾವಳಿ ಜಿಲ್ಲೆಗಳ ಗಡಿ ದಾಟಿ ಹೋಗಬೇಕಾದರೆ ಹಲವು ದೇಗುಲ, ದೈವಸ್ಥಾನಗಳು ಕಾಣಸಿಗುತ್ತವೆ. ಇಂತಹ ದೇಗುಲ, ಗುಡಿಗಳಿಗೆ ವಾಹನದಲ್ಲಿ ತೆರಳುವ ಸವಾರರೇ ಭಕ್ತರು. ಚಿಕ್ಕಮಗಳೂರು ಕಡೆಗೆ ತೆರಳುವವರು ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ವಾಹನ ಬದಿಗೆ ಸರಿಸಿ, ಗಾಡಿಯಿಂದ ಕೆಳಗೆ ಇಳಿದು ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ಮುಂದೆ ಸಾಗುತ್ತಾರೆ. ಅಂತಹದ್ದೇ ಇನ್ನೊಂದು ತಾಣ ಮಂಗಳೂರು-ಮಡಿಕೇರಿ ಸಂಪರ್ಕಿಸುವ ಗಡಿ ಭಾಗದಲ್ಲೂ ಇದೆ.
ಹೀಗೆ ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ಅಣ್ಣಪ್ಪ ಸ್ವಾಮಿ ದೇವಸ್ಥಾನವಿದ್ದು, ಚಾರ್ಮಾಡಿ ಘಾಟ್ ರಕ್ಷಿಸುತ್ತಿರುವುದು ಅಣ್ಣಪ್ಪ ಸ್ವಾಮಿ ಎಂದು ಜನ ನಂಬಿಕೊಂಡು ಬಂದಿದ್ದಾರೆ. ಚಿಕ್ಕಮಗಳೂರು ಕಡೆಗೆ ತೆರಳುವವರು ಅಣ್ಣಪ್ಪ ಸ್ವಾಮಿ ದೇಗುಲದ ಬಳಿ ವಾಹನ ಬದಿಗೆ ಸರಿಸಿ, ಗಾಡಿಯಿಂದ ಕೆಳಗೆ ಇಳಿದು ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ಮುಂದೆ ಸಾಗುತ್ತಾರೆ. ಅಂತದ್ದೇ ಇನ್ನೊಂದು ಪವಿತ್ರ ತಾಣ ಈ ಗುಡಿ.