Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

ದಕ್ಷಿಣ ಕನ್ನಡ ಜಿಲ್ಲಾಡಳಿತವು ಮತದಾರರನ್ನು ಆಕರ್ಷಿಸಲು ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಸಾಂಸ್ಕೃತಿಕ ಕಲೆಯ ಮೂಲಕ ಮತದಾನ ಕೇಂದ್ರವನ್ನ ಅಲಂಕರಿಸಲು ಆರಂಭಿಸಿದೆ.

First published:

 • 18

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಚುನಾವಣಾ ನೀತಿ ಸಂಹಿತೆ ಜಾರಿ ಬೆನ್ನಿಗೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ವಿಶೇಷವಾಗಿ ಪ್ರಜಾತಂತ್ರದ ಚುನಾವಣಾ ಹಬ್ಬದಲ್ಲಿ ಪ್ರತೀ ಮತದಾರರೂ ಪಾಲ್ಗೊಳ್ಳುವಂತೆ ಮಾಡಲು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

  MORE
  GALLERIES

 • 28

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಅಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮತದಾರರನ್ನು ಆಕರ್ಷಿಸಲು ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಸಾಂಸ್ಕೃತಿಕ ಕಲೆಯ ಮೂಲಕ ಮತದಾನ ಕೇಂದ್ರವನ್ನ ಅಲಂಕರಿಸಲು ಆರಂಭಿಸಿದೆ.

  MORE
  GALLERIES

 • 38

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರವಿದ್ದು, ಜಿಲ್ಲೆಯ 100 ಮತಗಟ್ಟೆಯಲ್ಲಿ ಕರಾವಳಿಯ ಸಾಂಸ್ಕೃತಿಕ ಕಲೆಗೆ ಸಂಬಂಧಿಸಿದ ಪೇಂಟಿಂಗ್ ಮಾಡುವ ಮೂಲಕ ಮತಗಟ್ಟೆಯನ್ನು ಅಲಂಕರಿಸಲು ಸ್ವೀಪ್ ತಂಡ ನಿರ್ಧರಿಸಿದೆ.

  MORE
  GALLERIES

 • 48

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಈಗಾಗಲೇ ಹಲವು ಕೇಂದ್ರಗಳಲ್ಲಿ ಪೇಂಟಿಂಗ್ ಮಾಡಲಾಗಿದ್ದು, ಚುನಾವಣೆಗೂ ಒಂದು ತಿಂಗಳು ಮುಂಚೆಯೇ ಆಕರ್ಷಣೆ ಪಡೆದಿದೆ.

  MORE
  GALLERIES

 • 58

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಯಕ್ಷಗಾನ ಕಲೆಯು ಕರಾವಳಿ ಕರ್ನಾಟಕದ ಗಂಡುಕಲೆಯಾಗಿದ್ದು, ಜನಸಾಮಾನ್ಯರು ಕೂಡಾ ಇಷ್ಟಪಡುವಂತಹ ಕಲೆಯಾಗಿದೆ.

  MORE
  GALLERIES

 • 68

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಸಂಗೀತ, ಅಭಿನಯ, ನೃತ್ಯ ಎಲ್ಲವನ್ನೂ ಹೊಂದಿರುವ ಯಕ್ಷಗಾನ ಕಲೆಯ ಬಗ್ಗೆ ಕರಾವಳಿಯ ಜನರಿಗೂ ವಿಶೇಷ ಒಲವಿದೆ. ಹಾಗಾಗಿ ಈ ಕಲೆಯನ್ನು ಸ್ವೀಪ್ ತಂಡ ಆಯ್ಕೆ ಮಾಡಿಕೊಂಡಿದೆ.

  MORE
  GALLERIES

 • 78

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಯಕ್ಷಗಾನ ಅಷ್ಟೇ ಅಲ್ದೇ ಇನ್ನೂ ನಾಲ್ಕು ಥೀಮ್ ಗಳನ್ನ ಸ್ವೀಪ್ ಸಮಿತಿ ಪೇಂಟಿಂಗ್ ಹಾಗೂ ಪ್ರತಿಕೃತಿ ಮೂಲಕ ಮತಗಟ್ಟೆ ಸಿಂಗರಿಸಲು ಮುಂದಾಗಿದೆ. ಯಕ್ಷಗಾನ ಮತಗಟ್ಟೆ, ಬ್ಲೂ ವೇವ್ ಮತಗಟ್ಟೆ, ಗೋ ಗ್ರೀನ್ ಮತಗಟ್ಟೆ ಹಾಗೂ ಕಂಬಳ ಮತಗಟ್ಟೆಯನ್ನು ಸ್ಥಾಪಿಸುವ ಯೋಜನೆಯನ್ನು ಸ್ವೀಪ್ ತಂಡ ಹೊಂದಿದೆ.

  MORE
  GALLERIES

 • 88

  Dakshina Kannada: ಕರಾವಳಿಯಲ್ಲಿದೆ 100 ಸೂಪರ್ ಮತಗಟ್ಟೆಗಳು!

  ಒಟ್ಟಾರೆ ವಿನೂತನ ಪ್ರಯೋಗಗಳಿಂದ ಕರಾವಳಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ.

  MORE
  GALLERIES