Dakshina Kannada: ತಿಂಗಳಿಗೆ 5 ಸಾವಿರ ಆದಾಯವಾದ್ರೂ ಇವ್ರ ಬಳಿಯಿದೆ ಹಳೆ ಸಾಮಗ್ರಿಗಳ ನೂರಾರು ಕಲೆಕ್ಷನ್!
ಇಂತಹ ಕಾಯಿನ್ ಬಾಕ್ಸ್, ಹಳೆಯ ಫೋನ್ಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹೈದರಾಲಿ ಅವರ ಸಂಗ್ರಹದಲ್ಲಿರುವ ಈ ಅಪರೂಪದ ವಸ್ತುಗಳು ಕುತೂಹಲ ಮೂಡಿಸುತ್ತವೆ. (ಮಾಹಿತಿ, ವರದಿ: ನಾಗರಾಜ್ ಭಟ್, ಮಂಗಳೂರು)
ಹಳೆಯ ಗ್ರಾಮಫೋನ್, ಝೆರಾಕ್ಸ್ ಯಂತ್ರ, ಬ್ಯಾಟರಿ ಟಾರ್ಚ್, ಚಿಮಣಿ ದೀಪ, ರೇಡಿಯೋ, ಟೇಪ್ ರೆಕಾರ್ಡರ್, ದೇಶ ವಿದೇಶದ ಕರೆನ್ಸಿ ನೋಟು ಹೀಗೆ ಒಂದೊಂದೂ ಅಪರೂಪದ ಹಳೆಯ ವಸ್ತುಗಳು!
2/ 8
ಇಂದಿನ ತಲೆಮಾರಿಗೆ ವಿಶೇಷ ಅನುಭವ ನೀಡುವ ಈ ವಸ್ತುಗಳು ಕೆಲವು ದಶಕಗಳ ಹಿಂದೆ ಸಾಮಾನ್ಯ ನಾಗರಿಕರು ಬಳಸುತ್ತಿದ್ದ ವಸ್ತುಗಳೇ ಆಗಿದ್ದವು. ಆದರೆ ಮುಂದಿನ ತಲೆಮಾರಿಗೂ ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ವಸ್ತುಗಳ ಸಂಗ್ರಹಿಸುವ ಹವ್ಯಾಸ ಹೊಂದಿರುವ ವ್ಯಕ್ತಿಯೊಬ್ಬರು ಗಮನ ಸೆಳೆದಿದ್ದಾರೆ.
3/ 8
ಹೌದು, ವಸ್ತು ಸಂಗ್ರಹಗಳ ಈ ವಿಶೇಷ ಆಸಕ್ತಿ ಹೊಂದಿರುವ ಇವರ ಹೆಸರು ಹಳ್ಳಿಮನೆ ಹೈದರಾಲಿ. ಮೂಲತಃ ಬೆಳ್ತಂಗಡಿಯ ಕೊಯ್ಯುರಿನವರು. ನರ್ಸರಿಯೊಂದರಲ್ಲಿ ಕೆಲಸ ಮಾಡುವ ಹೈದರ್ ತಮ್ಮ ದುಡಿಮೆಯ ಇಪ್ಪತ್ತು ಪ್ರತಿಶತವನ್ನ ವಸ್ತು ಸಂಗ್ರಹಕ್ಕಾಗಿಯೇ ಮೀಸಲಿಡುತ್ತಾರೆ.
4/ 8
ಹೈದರ್ ಅವರು ಚಿಕ್ಕಂದಿನಿಂದಲೇ ವಸ್ತು ಸಂಗ್ರಹದ ಬಗ್ಗೆ ಆಸಕ್ತಿ ಹೊಂದಿದ್ದರು, ಲಕ್ಷ್ಮೀ ಎಂಬ ಶಿಕ್ಷಕಿಯೋರ್ವರ ಪ್ರೇರಣೆಯಿಂದ ಶುರುವಾದ ಸಂಗ್ರಹದ ಕೆಲಸಕ್ಕೆ ಇದೀಗ ಐವತ್ತೆರಡು ವರ್ಷವಾಗಿದೆ.
5/ 8
ತಿಂಗಳಿಗೆ 5 ಸಾವಿರ ದುಡಿಯುವ ಹೈದರ್ ತಮ್ಮ ಜೊತೆ ತಮ್ಮ ಮಗಳಾದ ಪಟ್ಟಿಮುತ್ತು ರಜಿಯಾ ಆಲಿಯಾಳ ಜೊತೆಗೂಡಿ ವಸ್ತು ಸಂಗ್ರಹ ಮಾಡುತ್ತಿದ್ದಾರೆ. ಹೈದರ್ ಅವರ ಮಗಳು ಕೂಡ ತಮ್ಮ ಸ್ಕಾಲರ್ಶಿಪ್ ಹಣವನ್ನ ವಸ್ತು ಸಂಗ್ರಹಕ್ಕಾಗಿಯೇ ಮೀಸಲಿಟ್ಟಿದ್ದಾರಂತೆ.
6/ 8
ಇವರ ಸಂಗ್ರಹದಲ್ಲಿರುವ ಹಳೆಯ ಗ್ರಾಮಫೋನ್, ಝೆರಾಕ್ಸ್ ಯಂತ್ರ, ಬ್ಯಾಟರಿ ಟಾರ್ಚ್, ಚಿಮಣಿ ದೀಪ, ರೇಡಿಯೋ, ಟೇಪ್ ರೆಕಾರ್ಡರ್, ದೇಶ ವಿದೇಶದ ಕರೆನ್ಸಿ ನೋಟುಗಳ ಕಣ್ಮನ ಸೆಳೆಯುತ್ತವೆ.
7/ 8
ಒಂದಲ್ಲಾ ಒಂದು ಕಾಲದಲ್ಲಿ ಬಳಸುತ್ತಿದ್ದ ಝೆರಾಕ್ಸ್ ಮಷಿನ್ ಹೀಗಿತ್ತಂತೆ ನೋಡಿ! ಇದು ಸದ್ಯ ಹಳ್ಳಿಮನೆ ಹೈದರಾಲಿ ಅವರ ಸಂಗ್ರಹದಲ್ಲಿ ಜೋಪಾನವಾಗಿದೆ.
8/ 8
ಇಂತಹ ಕಾಯಿನ್ ಬಾಕ್ಸ್, ಹಳೆಯ ಫೋನ್ಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹೈದರಾಲಿ ಅವರ ಸಂಗ್ರಹದಲ್ಲಿರುವ ಈ ಅಪರೂಪದ ವಸ್ತುಗಳು ಕುತೂಹಲ ಮೂಡಿಸುತ್ತವೆ.