Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಜಾಗೃತರಾಗಿದ್ದು, ಎಲ್ಲೆಲ್ಲ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಅಲ್ಲೆಲ್ಲ ಭೇಟಿ ನೀಡಿ ಸರಿಪಡಿಸುವಲ್ಲಿ ನಿರತರಾಗಿದ್ದಾರೆ.

First published:

  • 17

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಸಂಜೆಯಿಂದ ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಜಿಲ್ಲೆಯ ಕಡಬ, ಸುಳ್ಯ, ಮಂಗಳೂರು, ಬೆಳ್ತಂಗಡಿ, ಮೂಡುಬಿದಿರೆ, ಪುತ್ತೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ಶುಕ್ರವಾರವೂ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇಂದು ಮುಂಜಾನೆ ಕೂಡಾ ಜಿಲ್ಲೆಯ ಹಲವೆಡೆ ಬಿಸಿಲಿನಿಂದ ಕೂಡಿದ್ದ ವಾತಾವರಣ ಕೊಂಚ ಮಳೆಯಿಂದ ಇಳೆ ತಂಪಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ಕರಾವಳಿ ಜಿಲ್ಲೆಯ ಹಲವೆಡೆ ಗಾಳಿ ಮಳೆಗೆ ವಿದ್ಯುತ್ ಕಂಬ, ಮರಗಳು ಧರಾಶಾಹಿಯಾದವು. ಹೀಗಾಗಿ ಜನ ಜೀವನ ಅಸ್ತವ್ಯಸ್ತವಾಯಿತು. ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ಹಲವೆಡೆ ವಿದ್ಯುತ್ ಉಪಕರಣಗಳಿಗೆ ಸಿಡಿಲು ಬಡಿದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇನ್ನು ತೆಂಗು, ಕಂಗು ಮರಗಳು ಧರಾಶಾಹಿಯಾದ ಪರಿಣಾಮ ಕೃಷಿಕರು ಅಪಾರ ಪ್ರಮಾಣದ ನಷ್ಟ ಅನಭವಿಸುವಂತಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ಗಾಳಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಲವೆಡೆ ವಿದ್ಯುತ್ ಕೈ ಕೊಟ್ಟಿತ್ತು. ಕೆಲವೆಡೆ ತಡರಾತ್ರಿ ವಿದ್ಯುತ್ ವಾಪಸ್ ಬಂದಿವೆ. ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಜಾಗೃತರಾಗಿದ್ದು, ಎಲ್ಲೆಲ್ಲ ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಅಲ್ಲೆಲ್ಲ ಭೇಟಿ ನೀಡಿ ಸರಿಪಡಿಸುವಲ್ಲಿ ನಿರತರಾಗಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ಶುಕ್ರವಾರವೂ ಸಾಯಂಕಾಲ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಳೆ ಇಲ್ಲದೇ ಕಂಗಾಲಾಗಿರುವ ಕರಾವಳಿ ಜನತೆಗೆ ಗುರುವಾರ ತಡರಾತ್ರಿವರೆಗೂ ಸುರಿದ ಮಳೆ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Mangaluru Rains: ಉರುಳಿದ ವಿದ್ಯುತ್ ಕಂಬಗಳು, ಕೈ ಕೊಟ್ಟ ಕರೆಂಟ್

    ಒಟ್ಟಾರೆ ಬಿಸಿಲಿನ ಬೇಗೆ, ಕುಡಿಯುವ ನೀರಿನ ಸಮಸ್ಯೆಯಿಂದ ಹೈರಾಣಾಗಿದ್ದ ಕರಾವಳಿ ಮಂದಿ ಮಳೆಯಿಂದ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES