ಕಾರಿನಲ್ಲಿ ಸಹಪ್ರಯಾಣಿಕ ಹೆಲ್ಮೆಟ್ ಧರಿಸಿಲ್ಲವೆಂದು ಪೊಲೀಸರು ದಂಡ ವಿಧಿಸಿದ ವಿಚಿತ್ರ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. (ಸಾಂದರ್ಭಿಕ ಚಿತ್ರ) ಸದ್ಯ ಕಾರು ಚಾಲಕನಿಗೆ ನೋಟಿಸ್ ಬಂದಿದ್ದು, 500 ರೂಪಾಯಿ ದಂಡ ಕಟ್ಟುವಂತೆ ಸೂಚಿಸಲಾಗಿದೆ. (ಸಾಂದರ್ಭಿಕ ಚಿತ್ರ) ನವೆಂಬರ್ ೨೯ ರಂದು ಮಂಗಳಾದೇವಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ ಸಲುವಾಗಿ ನೋಟಿಸ್ ಜಾರಿಯಾಗಿದೆ. ಡಿಸೆಂಬರ್ ೨೬ ರಂದು ಚಾಲಕನ ಕೈಗೆ ನೋಟಿಸ್ ತಲುಪಿದೆ. (ಸಾಂದರ್ಭಿಕ ಚಿತ್ರ) ತಲುಪಿದೆ. ಉಲ್ಲಂಘನೆ ವಿವರದಲ್ಲಿ "ಕಾರು" ಎಂದು ನಮೂದಿಸಿಲಾಗಿದೆ. ಸಹಪ್ರಯಾಣಿಕ ಹೆಲ್ಮೆಟ್ ದರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ನಮೂದಿಸಲಾಗಿದೆ. (ಸಾಂದರ್ಭಿಕ ಚಿತ್ರ) ಹೌದು, ಉಲ್ಲಂಘನೆ ನಡೆದಿದೆ ಎಂಬ ಜಾಗದಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಬೈಕ್ ಸವಾರರೊಬ್ಬರು ನಿಯಮ ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿ ಕಾಣಿಸಿತ್ತದೆ. (ಸಾಂದರ್ಭಿಕ ಚಿತ್ರ) ಕೂಗಳತೆ ದೂರದಲ್ಲಿ ಕಾರೊಂದು ಕಾಣಿಸಿಕೊಂಡಿದೆ. ಹೀಗಾಗಿ ಆಟೋಮೇಷನ್ ಪ್ರಕ್ರಿಯೆಯ ಲೋಪದೋಷದಿಂದಾಗಿ ಇಂತಹದೊಂದು ಘಟನೆ ನಡೆದಿದೆ ಎನ್ನಲಾಗುತ್ತಿದೆ. (ಸಾಂದರ್ಭಿಕ ಚಿತ್ರ) ಸದ್ಯ ಮಂಗಳೂರಿನಲ್ಲಿ ನಡೆದ ಈ ವಿಲಕ್ಷಣ ದಂಡ ಪ್ರಕರಣ ಭಾರೀ ವೈರಲ್ ಆಗುತ್ತಿದೆ. (ಸಾಂದರ್ಭಿಕ ಚಿತ್ರ)