ಶಿವನು ತಪಸ್ಸಿಗೆ ಕುಳಿತ ಪವಿತ್ರವಾದ ಸ್ಥಳ ಅವನ ತೇಜಸ್ಸಿನ ಅಂಶದಿಂದ ಕೂಡಿರುವುದರಿಂದ ಈ ಪೀಠವು 'ಜ್ವಾಲಾಪೀಠ' ಅಥವಾ ಅಗ್ನಿಪೀಠ ಎಂದು ಸಹ ಖ್ಯಾತಿಗೊಂಡಿದೆ. ಭಕ್ತರು ಆಡುಭಾಷೆಯಲ್ಲಿ ಈ ಕ್ಷೇತ್ರವನ್ನು 'ಉರಿಗದ್ದುಗೆ' ಎಂದು ಸಹ ಕರೆಯುತ್ತಾರೆ. ಈಶ್ವರನಿಂದ ಸ್ಥಾಪಿತವಾದ ಪೀಠಗಳಲ್ಲಿ ಇದೇ ಮೊದಲನೆಯದಂತೆ. ಹೀಗಾಗಿ ಈ ಕ್ಷೇತ್ರಕ್ಕೆ 'ಆದಿ ಚುಂಚನಗಿರಿ ಪೀಠ ಎಂದು ಹೆಸರು ಬಂದಿದೆ.