ಪ್ರತಿದಿನ ನಾವು ಹಲವಾರು ರೀತಿಯ ಪ್ರಾಣಿಗಳನ್ನು ನೋಡುತ್ತೇವೆ. ಇವುಗಳಲ್ಲಿ ಕೆಲವು ಸಾಕು ಪ್ರಾಣಿಗಳು ಮತ್ತು ಇನ್ನೂ ಕೆಲವು ಕಾಡು ಪ್ರಾಣಿಗಳು. ಎಲ್ಲರ ಮನೆಯಲ್ಲೂ ನಾಯಿಯನ್ನು ಸಾಕುಪ್ರಾಣಿಯಾಗಿ ಸಾಕುತ್ತಾರೆ. ಏಕೆಂದರೆ ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ನಂಬಲಾಗಿದೆ. ನಾಯಿ ಮಾತ್ರವಲ್ಲದೇ ಅನೇಕ ಪ್ರಾಣಿಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ ಮತ್ತು ಆ ಪ್ರಾಣಿಗಳು ಯಾವುವು? ಇದರ ವಿಶೇಷತೆ ಏನು ಅಂತ ನೋಡೋಣ..
ಹುಲಿ: ಭಾರತದ ರಾಷ್ಟ್ರ ಪ್ರಾಣಿ ಹುಲಿ ಎಮದು ಎಲ್ಲರಿಗೂ ತಿಳಿದಿದೆ. ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ 29ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಹುಲಿ ಯಾವಾಗಲೂ ಸಾಹಸದಲ್ಲಿ ಮುನ್ನಡೆಸುತ್ತದೆ. ಕೆಲವೊಮ್ಮೆ ಹುಲಿಗಳು ಕಾಡಿನಲ್ಲಿ ಸಾಹಸಗಳನ್ನು ಮಾಡುವುದನ್ನು ಕಾಣಬಹುದು.