ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿಗೆ ದೊಡ್ಡ ಸಮಸ್ಯೆಯಾಗಿದೆ. ಅನೇಕ ಜನರು ತಮ್ಮ ಆಹಾರ ಪದ್ಧತಿ ಅಥವಾ ಜೀವನಶೈಲಿಯನ್ನು ವರ್ಷಗಳ ಹಿಂದೆಯೇ ಬದಲಾಯಿಸಿರಬಹುದು. ಆದರೆ ಹೊರಗಿನ ತಿಂಡಿ, ಕಳಪೆ ಜೀವನ ಶೈಲಿ ಮತ್ತು ಕುಳಿತುಕೊಂಡು ಕೆಲಸ ಮಾಡುವುದು ಕೂಡ ತೂಕ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ಹೊಟ್ಟೆಯಲ್ಲಿ ಬೊಜ್ಜು ಹೆಚ್ಚಾಗುತ್ತದೆ. ಆದರೆ ನೀವು ನಿದ್ರೆ ಮಾಡುವ ಮೂಲಕ ಕೂಡ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಬಗ್ಗೆ ನಿಮಗೆ ತಿಳಿದಿದ್ಯಾ?
ಉತ್ತಮ ನಿದ್ರೆಗಾಗಿ ಏನು ತಿನ್ನಬೇಕು?: ಆದಷ್ಟು ಬೇಗನೇ ಊಟ ಮಾಡಲು ಪ್ರಯತ್ನಿಸಿ, ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಲಘು ಆಹಾರವನ್ನು ಸೇವಿಸುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹೆಚ್ಚು ಕೆಲಸ ಮಾಡುವುದಿಲ್ಲ, ಏಕೆಂದರೆ ಇದು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅದೇ ಸಮಯದಲ್ಲಿ, ಮಲಗುವ ಮುನ್ನ ಚಹಾ, ಕಾಫಿಯಂತಹ ಕೆಫೀನ್ ಹೊಂದಿರುವ ಉತ್ಪನ್ನಗಳನ್ನು ಸೇವಿಸಬೇಡಿ.