ಮೊಸರು ಒಂದು ಡೈರಿ ಉತ್ಪನ್ನವಾಗಿದೆ. ಇದು ಕ್ಯಾಲ್ಸಿಯಂ, ವಿಟಮಿನ್ ಬಿ -2, ವಿಟಮಿನ್ ಬಿ -12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್'ನಂತ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಮೊಸರಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೇ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. (Image:Canva)
ರವೆ ರೊಟ್ಟಿ: ಚೆನ್ನಾಗಿ ಹುದುಗಿಸಿದ ಮೊಸರಿನಿಂದ ನೀವು ಬೆಳಗಿನ ಉಪಹಾರಕ್ಕೆ ರವೆ ರೊಟ್ಟಿ ಮಾಡಬಹುದು. ಇದನ್ನು ಮಾಡುವುದು ಹೇಗೆ ಒಂದು ಬೌಲ್ನಲ್ಲಿ ಬೇಳೆ ಹಿಟ್ಟು, ರವೆ, ಹುಳಿ ಮೊಸರು ಜೊತೆಗೆ ನಿಮ್ಮ ನೆಚ್ಚಿನ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ತರಕಾರಿಗಳೊಂದಿಗೆ ಮಿಶ್ರಣ ಮಾಡಿ. ಈಗ ಈ ಮಿಶ್ರಣಕ್ಕೆ ನೀರು ಸೇರಿಸಿ ಮತ್ತು ತವಾ ಮೇಲೆ ಬೇಯಿಸಿ. ಸ್ವಲ್ಪ ಸಮಯದ ನಂತರ ರುಚಿಕರವಾದ ರವೆ ರೊಟ್ಟಿ ತಯಾರಾಗುತ್ತದೆ. ಇದು ಆರೋಗ್ಯಕ್ಕೂ ತುಂಬಾ ಉಪಯುಕ್ತವಾಗಿದೆ. (Image:Canva)
ಪನೀರ್ ತಯಾರಿಸಿ: ಮನೆಯಲ್ಲಿ ಪನೀರ್ ಮಾಡಲು ನೀವು ಹುಳಿ ಮೊಸರನ್ನು ಬಳಸಬಹುದು. ಇದಕ್ಕಾಗಿ ಮೊಸರನ್ನು ಕುದಿಸಿ ಮತ್ತು ಬಟ್ಟೆಯಿಂದ ಫಿಲ್ಟರ್ ಮಾಡಿ. ನಿಮ್ಮ ಪ್ರೋಟೀನ್ ಭರಿತ ಟೇಸ್ಟಿ ಪನೀರ್ ಸಿದ್ಧವಾಗಿದೆ. (Image:Canva) (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)