ಹಾಗಾಗಿ ಕೆಲವರು ತೂಕವನ್ನು ಕಳೆದುಕೊಳ್ಳಲು ಸಿಹಿ ಪದಾರ್ಥಗಳಿಂದ ದೂರವಿರುತ್ತಾರೆ. ಆದರೆ ಈ ಸಿಹಿ ಪದಾರ್ಥವನ್ನು ತಿನ್ನುವ ಮೂಲಕ ಕೂಡ ತೂಕವನ್ನು ಇಳಿಸಿಕೊಳ್ಳಬಹುದು. ಹೌದು, ಈ ವಿಚಾರ ಕೇಳಿ ನಿಮಗೆ ಶಾಕ್ ಆಗಬಹುದು. ಆದರೆ ನಿಜಕ್ಕೂ ಚಾಕಲೇಟ್ ತಿನ್ನುವ ಮೂಲಕ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ನೀವು ಫಿಟ್ ಆಗಿರಬೇಕು ಅಂದುಕೊಂಡರೆ ಡಾರ್ಕ್ ಚಾಕಲೇಟ್ ತಿನ್ನಿ. ಅಷ್ಟಕ್ಕೂ ಹೇಗೆ ತಿನ್ನಬೇಕು ಎಂಬುವುದರ ಕುರಿತಂತೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.
ತೂಕ ಇಳಿಸಿಕೊಳ್ಳಲು ಈ ರೀತಿ ಡಾರ್ಕ್ ಚಾಕೊಲೇಟ್ ತಿನ್ನಿ: ಡಾರ್ಕ್ ಚಾಕೊಲೇಟ್ ತಿನ್ನುವುದು ಒಂದು ಚಟದಂತೆ ಇರಬಹುದು. ಆದರೆ ಕಡಿಮೆ ತಿನ್ನುವುದು ಒಳ್ಳೆಯದು ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ಒಂದು ಅಥವಾ ಎರಡು ತುಂಡು ಡಾರ್ಕ್ ಚಾಕೊಲೇಟ್ ಅನ್ನು ತಿನ್ನುವುದು ನಿಮ್ಮ ಸಿಹಿತಿಂಡಿಗಳ ಹಂಬಲವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀವು ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಡಾರ್ಕ್ ಚಾಕೊಲೇಟ್ ಅನ್ನು ತಿನ್ನಬಹುದು.
ತೂಕವನ್ನು ಕಳೆದುಕೊಳ್ಳಲು, ನೀವು ಡಾರ್ಕ್ ಚಾಕೊಲೇಟ್ ಸ್ಮೂಥಿ ಅಥವಾ ಮಿಲ್ಕ್ ಶೇಕ್ ಜೊತೆಗೆ ಬೆರೆಸಿ ಕುಡಿಯಬಹುದು. ಆದರೆ ಡಾರ್ಕ್ ಚಾಕೊಲೇಟ್ ಸ್ಮೂಥಿ ಮಾಡುವಾಗ, ಅದನ್ನು ಹೆಚ್ಚಾಗಿ ಬೆರೆಸಬೇಡಿ. ಇದಕ್ಕಾಗಿ ಒಂದು ಕಪ್ ಹಾಲಿಗೆ 2 ಕ್ಯೂಬ್ ಚಾಕಲೇಟ್ ಸೇರಿಸಿ, ಶೇಕ್ ಮಾಡಿ ಕುಡಿಯಬಹುದು.ಇದನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.