Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

Health Tips: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಗ್ಯಾಸ್ ಮತ್ತು ಅಸಿಡಿಟಿಯಿಂದ ಬಳಲುತ್ತಿದ್ದಾರೆ. ಯುವಜನತೆ ಕೂಡ ಈ ಸಮಸ್ಯೆಗಳಿಂದ ಹೈರಾಣಾಗಿದ್ದಾರೆ. ಆಸ್ಪತ್ರೆಗೆ ಹೋಗದೆಯೇ ಮನೆಮದ್ದುಗಳ ಮೂಲಕ ಹೊಟ್ಟೆ, ಎದೆ ಉರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

First published:

  • 17

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    ಇತ್ತೀಚಿನ ದಿನಗಳಲ್ಲಿ ಅವೈಜ್ಞಾನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಅನೇಕ ರೀತಿಯ ಕಾಯಿಲೆಗಳು ಬರುತ್ತಿವೆ. ಅನೇಕ ಜನರು ವಿಶೇಷವಾಗಿ ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಗ್ಯಾಸ್ ಮತ್ತು ಅಸಿಡಿಟಿ ಸಾಮಾನ್ಯವೇನೋ ಎಂಬಂತೆ ಆಗಿದೆ.

    MORE
    GALLERIES

  • 27

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಹೊಟ್ಟೆಯಲ್ಲಿ ಗ್ಯಾಸ್ ಶೇಖರಣೆಯಾಗುತ್ತದೆ. ಇದರಿಂದ ಹೊಟ್ಟೆಯುಬ್ಬರ ಸಮಸ್ಯೆ ಉಂಟಾಗುತ್ತದೆ. ಅಸಿಡಿಟಿ ಹೆಚ್ಚುತ್ತದೆ, ಹುಳಿ ತೇಗು ಬರುತ್ತವೆ. ಕೆಲವೊಮ್ಮೆ ಹೊಟ್ಟೆ ನೋವು ಅಸಹನೀಯವಾಗಿರುತ್ತದೆ.

    MORE
    GALLERIES

  • 37

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    ಹೊಟ್ಟೆಯ ಕಾಯಿಲೆಗಳಿಗೆ ಒಣದ್ರಾಕ್ಷಿ ರಾಮಬಾಣವೇ ಸರಿ. ಇದು ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯೆಂಟ್ ಗಳು, ಪಾಲಿಫಿನಾಲ್ಗಳು ಮತ್ತು ಫೈಬರ್ ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

    MORE
    GALLERIES

  • 47

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    ಮಲಬದ್ಧತೆ, ಅಸಿಡಿಟಿ, ಸುಸ್ತು ಸೇರಿದಂತೆ ಮುಂತಾದ ಸಮಸ್ಯೆಗಳಿದ್ದರೆ, ಒಣದ್ರಾಕ್ಷಿ ನಿಮಗೆ ಪರಿಹಾರ ನೀಡುತ್ತದೆ. ಇದಲ್ಲದೆ, ಇದು ಮೂಳೆಗಳು ಮತ್ತು ಹಲ್ಲುಗಳಿಗೆ ಪ್ರಯೋಜನಕಾರಿಯಾಗಿದೆ.. ರಕ್ತವೂ ಶುದ್ಧವಾಗುತ್ತದೆ.

    MORE
    GALLERIES

  • 57

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    ಇದರಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಅಧಿಕ ರಕ್ತದೊತ್ತಡದಿಂದ ನಿಮ್ಮನ್ನು ರಕ್ಷಿಸುತ್ತದೆ. ಒಣದ್ರಾಕ್ಷಿಯಲ್ಲಿರುವ ನಾರಿನಂಶ ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ. ಹೊಟ್ಟೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    ಒಣದ್ರಾಕ್ಷಿ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಒಣದ್ರಾಕ್ಷಿಯನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಒಂದು ಹಿಡಿ ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ, ನಂತರ ಅವನ್ನು ತಿಂದು ನೀರು ಕುಡಿದರೆ ದೇಹದಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ.

    MORE
    GALLERIES

  • 77

    Acidity Problem: ಹೊಟ್ಟೆ-ಎದೆಯುರಿಗೆ ಒಣ ದ್ರಾಕ್ಷಿಯೇ ರಾಮಬಾಣ; ಈ ರೀತಿ ತಿಂದರಷ್ಟೇ ಪರಿಣಾಮಕಾರಿ

    (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಕನ್ನಡ ಇದನ್ನು ಪರಿಶೀಲಿಸಿಲ್ಲ. ಇವುಗಳನ್ನು ಕಾರ್ಯಗತಗೊಳಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.)

    MORE
    GALLERIES