ಗೋವಾದ ಲ್ಯಾಟಿನ್ ಕ್ವಾರ್ಟರ್ ಎಂದೂ ಕರೆಯಲ್ಪಡುವ ಫಾಂಟೈನಸ್, ಪಂಜಿಮ್‌ನಲ್ಲಿದೆ, ಇದು ಔರೆಮ್ ಕ್ರೀಕ್ ಎಂಬ ಪುರಾತನ ನದಿಯಿಂದ ಸುತ್ತುವರೆದಿದೆ. ಇಲ್ಲಿ 18 ನೇ ಮತ್ತು 19 ನೇ ಶತಮಾನಗಳ ಹಿಂದಿನ ಹಳೆಯ ಪೋರ್ಚುಗೀಸ್ ಮಾರ್ವೆಲ್ ಮನೆಗಳಿವೆ. ಕೆಂಪು ಬಣ್ಣದ ಹೆಂಚಿನ ಛಾವಣಿಗಳು, ಕಲಾತ್ಮಕ ಬಾಗಿಲುಗಳು ಮತ್ತು ಓವರ್‌ಹೆಡ್ ಬಾಲ್ಕನಿಗಳೊಂದಿಗೆ ಹಸಿರು, ತಿಳಿ ಹಳದಿ ಮತ್ತು ನೀಲಿ ಬಣ್ಣಗಳಿಂದ ಚಿತ್ರಗಳನ್ನು ಬಿಡಿಸಲಾಗಿದೆ.
ದೂಧಸಾಗರ್ ಜಲಪಾತವನ್ನು ಅದರ ಹಾಲಿನ ಬಿಳಿ ಬಣ್ಣದಿಂದಾಗಿ ಅಕ್ಷರಶಃ "ಹಾಲಿನ ಸಮುದ್ರ" ಎಂದು ಕರೆಯಲಾಗುತ್ತದೆ. ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ ಅಥವಾ ಭಗವಾನ್ ಮಹಾವೀರ್ ಅಭಯಾರಣ್ಯದ ಮಧ್ಯೆ ನೀವು ಭವ್ಯವಾದ ಮತ್ತು ಅದ್ಭುತವಾಗಿ ಹರಿಯುವ ದೂಧಸಾಗರ್ ಜಲಪಾತವನ್ನು ಎಂಜಾಯ್ ಮಾಡಬಹುದು. 1017 ಅಡಿ ಎತ್ತರದಿಂದ ಪರ್ವತದ ಕಡಿದಾದ ಭಾಗದಿಂದ ಮಾಂಡೋವಿ ನದಿಯು ಬೀಳುತ್ತದೆ. ಈ ಮಾಂಡೋವಿ ನದಿಯು ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಹುಟ್ಟುತ್ತದೆ ಮತ್ತು ಪಶ್ಚಿಮ ಘಟ್ಟಗಳ ಮೂಲಕ ತನ್ನ ಮಾರ್ಗದ ಮೂಲಕ ಗೋವಾದಲ್ಲಿ ಜಲಪಾತವಾಗುತ್ತದೆ.
ಬ್ಯಾಟ್ ಐಲ್ಯಾಂಡ್ ಎಂದೂ ಕರೆಯಲ್ಪಡುವ ಗೋವಾದ ಪೆಕ್ವೆನೊ ದ್ವೀಪವು ವಾಸ್ಕೋ-ಡ-ಗಾಮಾದ ಬೈನಾ ಬೀಚ್‌ನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು ಸಾಹಸಗಳನ್ನು ಇಷ್ಟಪಡುವವರಿಗೆ ಒಂದು ಅದ್ಬುತ ಅನುಭವವನ್ನು ನೀಡುತ್ತದೆ. ಪೆಕ್ವೆನೊ ದ್ವೀಪವು ಸ್ನಾರ್ಕ್ಲಿಂಗ್‌ಗೆ ಹೆಸರುವಾಸಿಯಾಗಿದೆ ಮತ್ತು ಸ್ನಾರ್ಕಲರ್‌ಗಳಿಗೆ ಪರಿಪೂರ್ಣ ತಾಣವೆಂದು ಪರಿಗಣಿಸಲಾಗಿದೆ. ಸ್ನಾರ್ಕ್ಲಿಂಗ್‌ಗಾಗಿ, ತರಬೇತಿ ಮತ್ತು ಸಲಕರಣೆಗಳನ್ನು ಪ್ರವಾಸ ಸಂಘಟಕರು ಮತ್ತು ನಿರ್ವಾಹಕರು ಒದಗಿಸುತ್ತಾರೆ.
ಸುಂದರವಾದ ದಿವಾರ್ ದ್ವೀಪವು ಹಳೆಯ ಗೋವಾದಿಂದ ಮಾಂಡೋವಿ ನದಿಯ ಉದ್ದಕ್ಕೂ ನೆಲೆಗೊಂಡಿದೆ. ಒಂದು ದೋಣಿ ದ್ವೀಪದ ದಕ್ಷಿಣ ತುದಿಯನ್ನು ಹಳೆಯ ಗೋವಾದೊಂದಿಗೆ ಸಂಪರ್ಕ ನೀಡುತ್ತದೆ. ಹಳೆ ಗೋವಾದ ವೈಸರಾಯ್ ಕಮಾನಿನ ಬಳಿ ದೋಣಿ ವಾರ್ಫ್ ಇದೆ.ಮತ್ತೊಂದು ದೋಣಿಯು ದಿವಾರ್ ದ್ವೀಪದ ಉತ್ತರದ ತುದಿಯನ್ನು ಬಿಚೋಲಿಮ್ ಉಪವಿಭಾಗದಲ್ಲಿರುವ ನಾರ್ವೆ ಅಥವಾ ನರೋವಾ ಗ್ರಾಮಕ್ಕೆ ಸಂಪರ್ಕಿಸುತ್ತದೆ. ಪಣಜಿಯಿಂದ ಮಾಯೆಮ್ ಸರೋವರಕ್ಕೆ ಭೇಟಿ ನೀಡಲು ದಿವಾರ್ ದ್ವೀಪವು ಶಾರ್ಟ್‌ಕಟ್ ಅನ್ನು ನೀಡುತ್ತದೆ.