ಸಾಮಾನ್ಯವಾಗಿ ತುಪ್ಪದ ಬೆಲೆ ತುಂಬಾ ದುಬಾರಿಯಾಗಿದೆ. ಹಾಗಾಗಿ, ಕೆಲವರು ತುಪ್ಪಕ್ಕೆ ಮಾರ್ಗರೀನ್ ತುಪ್ಪ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸುತ್ತಾರೆ. ಇನ್ನೊಂದೆಡೆ ಈ ಬಗ್ಗೆ ತಿಳಿಯದೇ ಜನ ಕಲಬೆರಕೆ ತುಪ್ಪವನ್ನು ಮಾರುಕಟ್ಟೆಯಿಂದ ಖರೀದಿಸುತ್ತಿದ್ದಾರೆ. ಆದರೆ, ನೀವು ಕೆಲವು ಸಿಂಪಲ್ ಟಿಪ್ಸ್ಗಳ ಮೂಲಕ ತುಪ್ಪದ ಶುದ್ಧತೆಯನ್ನು ನಿಮಿಷದಲ್ಲಿಯೇ ಪರಿಶೀಲಿಸಬಹುದು. ಹಾಗಾದರೆ ತುಪ್ಪದ ಶುದ್ಧತೆಯನ್ನು ಪರೀಕ್ಷಿಸುವುದೇಗೆ ಎಂಬುವುದರ ಕುರಿತಂತೆ ತಿಳಿದುಕೊಳ್ಳಲು ಈ ಟಿಪ್ಸ್ಗಳು ನಿಮಗಾಗಿ..
ಮನೆಯಲ್ಲಿಯೇ ಹಸ್ತ ಪರೀಕ್ಷೆ ಮಾಡುವುದರಿಂದ ನಿಜವಾದ ತುಪ್ಪ ಯಾವುದು ಮತ್ತು ನಕಲಿ ತುಪ್ಪ ಯಾವುದು ಎಂದು ಸುಲಭವಾಗಿ ತಿಳಿಯಬಹುದು. ಇದಕ್ಕಾಗಿ, 1 ಟೀಸ್ಪೂನ್ ತುಪ್ಪವನ್ನು ತೆಗೆದುಕೊಂಡು ಅದನ್ನು ಅಂಗೈಗಳ ಮೇಲೆ ಇರಿಸಿ. ಈ ವೇಳೆ ನಿಜವಾದ ತುಪ್ಪವು ಬೇಗನೆ ಕರಗಲು ಪ್ರಾರಂಭಿಸುತ್ತದೆ. ಮತ್ತೊಂದೆಡೆ, ನಕಲಿ ತುಪ್ಪವನ್ನು ಕೈಯಲ್ಲಿ ಇಟ್ಟುಕೊಂಡರೂ, ಅದು ದೀರ್ಘಕಾಲದವರೆಗೆ ಗಟ್ಟಿಯಾಗಿಯೇ ಇರುತ್ತದೆ.
ತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ನೀವು ಡಬಲ್ ಬಾಯ್ಲರ್ ಪರೀಕ್ಷೆಯನ್ನು ಸಹ ಪ್ರಯತ್ನಿಸಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 2 ಚಮಚ ತುಪ್ಪವನ್ನು ತೆಗೆದುಕೊಳ್ಳಿ. ಈಗ ಬಿಸಿನೀರಿನ ಮೇಲೆ ಒಂದು ಪಾತ್ರೆಯಲ್ಲಿ ತುಪ್ಪವನ್ನು ಇಟ್ಟು ಕರಗಿಸಿ. ಇದಾದ ನಂತರ, ಒಂದು ಕ್ಲೀನ್ ಪಾತ್ರೆಯಲ್ಲಿ ತುಪ್ಪವನ್ನು ತುಂಬಿಸಿ ಮತ್ತು ಫ್ರಿಜ್ನಲ್ಲಿ ಇರಿಸಿ. ಈ ವೇಳೆ, ತೆಂಗಿನ ಎಣ್ಣೆಯನ್ನು ಸೇರಿಸಿದಾಗ, ತುಪ್ಪವು ವಿವಿಧ ಪದರಗಳಲ್ಲಿ ಗಟ್ಟಿಯಾಗುತ್ತದೆ. ಇದರಿಂದ ತುಪ್ಪ ನಕಲಿ ಎಂದು ತಿಳಿಯಬಹುದು.