ದಪ್ಪವಾದ ಮತ್ತು ಸುಂದರವಾದ ಕೂದಲಿಗಾಗಿ ಹುಡುಗಿಯರು ಏನೆಲ್ಲಾ ಪ್ರಯತ್ನ ಮಾಡುತ್ತಾರೆ. ಕೂದಲು ದಪ್ಪವಾಗಲು ಬಾಹ್ಯ ಉತ್ಪನ್ನಗಳನ್ನು ಬಳಸುವುದರ ಜೊತೆಗೆ, ನಮ್ಮ ಆಹಾರ ಮತ್ತು ಪಾನೀಯವೂ ಮುಖ್ಯವಾಗಿದೆ. ಏಕೆಂದರೆ ಪೌಷ್ಠಿಕಾಂಶವುಳ್ಳ ಆಹಾರ ಸೇವಿಸದಿದ್ದರೆ ನಮ್ಮ ಕೂದಲು ಬೆಳೆಯುವುದಿಲ್ಲ. ಇಷ್ಟೇ ಅಲ್ಲದೇ ದಪ್ಪ ಕೂದಲಿಗಾಗಿ ಕೆಲವು ಆಸನಗಳನ್ನು ಮಾಡುವುದು ಕೂಡ ಬಹಳ ಮುಖ್ಯವಾಗಿದೆ. (ಸಾಂಕೇತಿಕ ಚಿತ್ರ)
ಬಾಲಾಸನ: ಕೂದಲು ಬೆಳವಣಿಗೆ ಮತ್ತು ಕೂದಲು ದಪ್ಪವಾಗಲು ಬಾಲಾಸನದ ಅಭ್ಯಾಸವು ಪ್ರಯೋಜನಕಾರಿಯಾಗಿದೆ. ಬಾಲಾಸನವನ್ನು ಮಾಡಲು, ನಿಮ್ಮ ಮೊಣಕಾಲುಗಳನ್ನು ಬಾಗಿಸಿ ವಜ್ರಾಸನದಲ್ಲಿ ಕುಳಿತುಕೊಳ್ಳಿ. ತೋಳುಗಳನ್ನು ಮೇಲಕ್ಕೆತ್ತಿ ಆಳವಾದ ಉಸಿರನ್ನು ತೆಗೆದುಕೊಳ್ಳಿ, ನಂತರ ಉಸಿರಾಡುವಾಗ ದೇಹವನ್ನು ಮುಂದಕ್ಕೆ ಬಾಗಿಸಿ, ತಲೆಯನ್ನು ನೆಲದ ಮೇಲೆ ಮತ್ತು ಹೊಟ್ಟೆಯನ್ನು ತೊಡೆಯ ಮೇಲೆ ಇರಿಸಿ. (ಸಾಂಕೇತಿಕ ಚಿತ್ರ)
ತ್ರಿಕೋನಾಸನ : ಒಣ ಕೂದಲು ತೊಡೆದುಹಾಕಲು ತ್ರಿಕೋನಾಸನವನ್ನು ಅಭ್ಯಾಸ ಮಾಡಿ. ಎರಡೂ ಪಾದಗಳನ್ನು ದೂರವಿರಿಸಿ. ತೋಳುಗಳನ್ನು ಮತ್ತು ಭುಜಗಳನ್ನು ನೇರವಾಗಿ ಮೇಲಕ್ಕೆತ್ತಿ. ಈಗ ಬಲಗೈಯಿಂದ ಪಾದಗಳನ್ನು ಸ್ಪರ್ಶಿಸಿ. ಇನ್ನೊಂದು ಬದಿಯಿಂದಲೂ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. (ಸಾಂಕೇತಿಕ ಚಿತ್ರ) (ಹಕ್ಕುತ್ಯಾಗ: ಈ ಲೇಖನವು ಸಾರ್ವಜನಿಕ ನಂಬಿಕೆಗಳು, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿದೆ. ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)